ಸಸಿಹಿತ್ಲು ಭಗವತೀ ದೇವಸ್ಥಾನದ ನಡಾವಳಿ ಉತ್ಸವದ ಪೂರ್ವಭಾವಿಯಾಗಿ ಗೊನೆ ಮುಹೂರ್ತ
ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಏ.10 ರಂದು ನಡಾವಳಿ ಉತ್ಸವವು ನಡೆಯಲಿದ್ದು,ಉತ್ಸವದ ಪೂರ್ವಭಾವಿಯಾಗಿ, ಕದಿಕೆ ಭಂಡಾರ ಮಂದಿರದಲ್ಲಿ ಗೊನೆ ಮುಹೂರ್ತವು ನಡೆಯಿತು.
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತಕ್ಕೆ ಚಾಲನೆಯನ್ನು ನೀಡಿದರು.ಪ್ರಮುಖರುಗಳು ಈ ಸಂದರ್ಭ ಉಪಸ್ಥಿತರಿದ್ದರು.ದೇವಸ್ಥಾನದಲ್ಲಿ ಏ.10 ರಿಂದ ಏ.16 ರ ತನಕ ನಡಾವಳಿ ಉತ್ಸವ ಹಾಗೂ ಭರಣಿ ಮಹೋತ್ಸವವು ನಡೆಯಲಿದೆ.