-->
ಮಾಳಿಗೆದಾರ್ ಎಂದೇ ಪ್ರಸಿದ್ದಿ ಪಡೆದ   ಖ್ಯಾತ ವೈದ್ಯ ಡಾ.ಶಾಸ್ತ್ರಿಗಳು

ಮಾಳಿಗೆದಾರ್ ಎಂದೇ ಪ್ರಸಿದ್ದಿ ಪಡೆದ ಖ್ಯಾತ ವೈದ್ಯ ಡಾ.ಶಾಸ್ತ್ರಿಗಳು

ಕಿನ್ನಿಗೋಳಿ:ಕಿನ್ನಿಗೋಳಿ ಮತ್ತು ಸುತ್ತ ಮುತ್ತಲ ಜನಕ್ಕೆ 'ಮಾಳಿಗೆದಾರ್' ಅಂದರೆ ಸಾಕು ಬೇರೆನೂ ಹೇಳಬೇಕಾಗಿಲ್ಲ ಅದು ಖ್ಯಾತ ವೈದ್ಯರು, ಪಾಪದಕಲೆನ ಡಾಕ್ಟರ್, ಶಾಸ್ರಿಗಳು ಎಂದು ಗೊತ್ತಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಕಿನ್ನಿಗೋಳಿಯ ಜನತೆಗೆ ವೈದ್ಯಕೀಯ ಸೇವೆ ನೀಡುವ ಶಾಸ್ತ್ರಿ ಡಾಕ್ಟರ್ .ಬಸ್ಸು ನಿಲ್ದಾಣದ ಪಕ್ಕದ ಹಳೆಯ ಕಟ್ಟಡದ ಮೊದಲ ಮಹಡಿಯಲ್ಲಿ, ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮೊದಲ ಮಹಡಿಯಲ್ಲಿರುವ ಕಾರಣ ಅವರು 'ಮಾಳಿಗೆದಾರ್ 'ಎಂದು ಜನರಿಂದ ಕರೆಯಲ್ಪಡುತ್ತಾರೆ. 
 ಬಡ ರೋಗಿಗಳ  ಪಾಲಿಗಂತೂ ಈ 'ಮಾಳಿಗೆದಾರ್ 'ದೇವರೇ ಆಗಿದ್ದಾರೆಅತೀ ಕಡಿಮೆ ಬೆಲೆ ವೈದ್ಯಕೀಯ ಸೇವೆ ನೀಡುವ ಈ 'ಮಾಳಿಗೆದಾರ್'  ವೈದ್ಯರ ಶುಲ್ಕ ಪ್ರಸ್ತುತ ದಿನಗಳಲ್ಲಿಯೂ 70 ರೂಪಾಯಿಯನ್ನು ದಾಟಿಲ್ಲ.ಆ 70 ರೂಪಾಯಿಯಲ್ಲೂ ಕೆಲವು ಮಾತ್ರೆಗಳು ಬರುತ್ತೆ, ನಿಮಗೆ ಗೊತ್ತಿರಬಹುದು ಕೊರೋನಾ ಎಂಬ ಮಾರಕ ರೋಗ ಬರಸಿಡಿಲಿನಂತೆ ಬಡಿದು ಇಡೀ ಪ್ರಪಂಪಚವೇ ಮೌನವಾದ ಸಂದರ್ಭ, ಜನ ಹೊರ ಬರಲೂ ಹೆದರುತ್ತಿದ್ದ ಕಾಲ, ಸರಕಾರ ಲಾಕ್ ಡೌನ್ ಮಾಡಿತ್ತು. ಕೆಲ ವೈದ್ಯರೂ ಕೂಡ ತಮ್ಮ ಕ್ಲಿನಿಕ್ ಬಂದ್ ಮಾಡಿ ಮನೆಯಲ್ಲೇ ಕುಳಿತಿದ್ದರು. ಆದರೆ ಈ'ಮಾಳಿಗೆದಾರ್ ' ಮಾತ್ರ ಎಂದಿನಂತೆ ಕಿರು ನಗೆ ಸೂಸುತ್ತ ಪ್ರತೀ ದಿನ ರೋಗಿಗಳನ್ನು ವಿಚಾರಿಸುತ್ತಿದ್ದರು.ಅಂದಿನ ದಿನಗಳಲ್ಲಿ ಎಷ್ಟೋ ಅಸ್ಪತ್ರೆಗಳು ಕೊರೋನಾವನ್ನೇ‌ ಪಣವಾಗಿಟ್ಟುಕೊಂಡು ಹಣ ದೋಚುತ್ತಿದ್ದರೂ ಈ 'ಮಾಳಿಗೆದಾರ್ ' ರವರ  ಚಾರ್ಜ್ ಮಾತ್ರ ಎಂದಿನಂತೆ 50, 60 ಅಥವಾ 70 ರೂಪಾಯಿ, ಚಿಕ್ಕ ಪುಟ್ಟ ತಪಾಸಣೆಗಳು ಉಚಿತ. ಎಲ್ಲ ರೋಗಿಗಳೊಂದಿಗೆ ತಮಾಷೆಯೊಂದಿಗೆ ಮಾತನಾಡಿ, ಮಾತ್ರೆಯೊಂದಿಗೆ ಚಾಕಲೇಟು ನೀಡಿ ಕಳುಹಿಸುವ ಸ್ವಾಮ್ಯ ಸ್ವಭಾವದ ಡಾಕ್ಟರ್ 'ಮಾಳಿಗೆದಾರ್' ನಮ್ಮ ಡಾಕ್ಟರ್ ನಮ್ಮ ಹೆಮ್ಮೆ.

ಬರಹ:
✍️ನಿಶಾಂತ್ ಕಿಲೆಂಜೂರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ