-->

ಬಪ್ಪನಾಡು  ನಿವಾಸಿ ಲಕ್ಷ್ಮೀನಾರಾಯಣ ಭಟ್ ನಿಧನ

ಬಪ್ಪನಾಡು ನಿವಾಸಿ ಲಕ್ಷ್ಮೀನಾರಾಯಣ ಭಟ್ ನಿಧನ

ಮುಲ್ಕಿ: ಇಲ್ಲಿಗೆ ಸಮೀಪದ ಬಪ್ಪನಾಡು ನಿವಾಸಿ ಲಕ್ಷ್ಮೀನಾರಾಯಣ ಭಟ್ (ಅಮುನ ಭಟ್) ರವರು ಹೃದಯಾಘತದಿಂದ ಮಂಗಳವಾರ ನಿಧನರಾದರು.
ಅವರು ಪುರೋಹಿತ ವೃತ್ತಿಯ ಜೊತೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯ ವೇದಪಾರಾಯಣ ನಡೆಸುತ್ತಿದ್ದರು.
ಅವರು ಮುಲ್ಕಿ ಪರಿಸರದಲ್ಲಿ ಸರಳ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು.
ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದರು
ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಬಪ್ಪನಾಡು ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್
ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಮಂಡಲಾಧ್ಯಕ್ಷ ಸುನಿಲ್ ಆಳ್ವ, ವೆಂಕಟೇಶ ಹೆಬ್ಬಾರ್
ವಾಮನ್ ಕೋಟ್ಯಾನ್ ನಡಿಕುದ್ರು 
ಕಿಶೋರ್ ಶೆಟ್ಟಿ ಬಪ್ಪನಾಡು, ಗೋಪಾಲಕೃಷ್ಣ ಭಟ್, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ಶಿವಶಂಕರ ವರ್ಮ, ಸುರೇಶ್ ಶೆಟ್ಟಿ ಶಿಮಂತೂರು ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807