ಮೃತ ಉಪನ್ಯಾಸಕಿ ಗ್ಲೋರಿಯ ಆಶಾ ರೊಡ್ರಿಗಸ್ ಮನೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಭೇಟಿ ,ಕುಟುಂಬಸ್ಥರಿಗೆ ಸಾಂತ್ವಾನ
Wednesday, November 20, 2024
ಬಜಪೆ:ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿದ್ದ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ ಅವರು ಬುಧವಾರದಂದು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಆಗಮಿಸಿದ್ದು, ನ. 13 ರಂದು ನಿಧನರಾದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಬಜಪೆ ಸಮೀಪದ ಪೆರಾರ ನಿವಾಸಿ ಗ್ಲೋರಿಯ ಆಶಾ ರೊಡ್ರಿಗಸ್ ರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಬಜ್ಪೆ ಚರ್ಚ್ ನ ಧರ್ಮ ಗುರು ಡಾ ರೊನಾಲ್ಡ್ ಕುಟಿನ್ಹೊ ,ಕಾಂಗ್ರೆಸ್ ಮುಖಂಡರಾದ ಸಿರಾಜ್ ಬಜ್ಪೆ ,ಜೇಕಬ್ ಪಿರೇರಾ ನಿಸಾರ್ ಕರಾವಳಿ ,ಕಂದಾವರ ಗ್ರಾ ಪಂ ಸದಸ್ಯ ಸಂತು ಉನಿಲೆ ,ಪೇಜಾವರ ವಲಯ ಕೆಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜಾ ,ಸಂತ ಜೋಸೆಫ್ ಚರ್ಚ್ ನ ಉಪಾಧ್ಯಕ್ಷ ಸ್ಟಾನಿ ಡಿಸೋಜಾ ,