ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಅನಂತ್ ನಾಗ್ ಭೇಟಿ
Tuesday, September 5, 2023
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಅನಂತ್ ನಾಗ್ ಭೇಟಿ ನೀಡಿದರು. ದೇವಳದ ವತಿಯಿಂದ ಚಿತ್ರನಟ ಅನಂತ್ ನಾಗ್ ಅವರಿಗೆ ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣರವರು ದೇವರ ಶೇಷ ವಸ್ರ್ರ, ಪ್ರಸಾದ ನೀಡಿದರು. ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಅವರು ದೇವಳದ ಬಗ್ಗೆ ಮಾಹಿತಿ ನೀಡಿದರು.ನಂತರ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ಮಂಗಳೂರಿನಲ್ಲಿ ಅತ್ಮೀಯರು ಸೇರಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.ತುಂಭಾ ಖುಷಿ ತಂದುಕೊಟ್ಟಿದೆ.ತುಳು ಚಿತ್ರರಂಗ ತುಂಬಾ ಬೆಳವಣಿಗೆ ಕಂಡಿದೆ ಇನ್ನಷ್ಟು ಬೆಳೆಯಬೇಕು ಎಂದರು. ಅನಂತ್ ನಾಗ್ ಜೊತೆ ಪತ್ನಿ, ಮಗಳು ಅಳಿಯ, ಉದ್ಯಮಿ ನರೇಶ್ ಶಣೈ, ಗಿರಿಧರ್ ಶೆಟ್ಟಿ ಮತ್ತಿತರರು ಇದ್ದರು .