-->


ಉಪನ್ಯಾಸಕ,ಸಾಹಿತಿ  ಪ್ರದೀಪ್ ಡಿ.ಎಮ್ ಹಾವಂಜೆಯವರಿಗೆ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಉಪನ್ಯಾಸಕ,ಸಾಹಿತಿ ಪ್ರದೀಪ್ ಡಿ.ಎಮ್ ಹಾವಂಜೆಯವರಿಗೆ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ



ವಿಶೇಷ ವರದಿ:
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ  ಪ್ರದೀಪ್  ಡಿ.ಎಮ್ ಹಾವಂಜೆ ಇವರು 2024 ನೇ ಸಾಲಿನ ಉಡುಪಿ ಜಿಲ್ಲಾ ಸಾಹಿತ್ಯ ವಿಭಾಗದಲ್ಲಿ  ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಉಪನ್ಯಾಸಕ , ಲೇಖಕ , ಸಾಹಿತಿ , ಮಂಗಳೂರು ಆಕಾಶವಾಣಿಯ ನಿರೂಪಕ , ಸಂಪನ್ಮೂಲ ವ್ಯಕ್ತಿ, ನಾಟಕ ರಚನೆಕಾರ ಮತ್ತು ನಿರ್ದೇಶಕ ಪ್ರದೀಪ್  ಡಿ.ಎಮ್ ಹಾವಂಜೆಯವರ ಸಾಹಿತ್ಯ ಕಲಾ ಸೇವೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಜಿಲ್ಲಾಡಾಳಿತ ಗೌರವಿಸಿದೆ.
ಕನ್ನಡ ಉಪನ್ಯಾಸಕರಾಗಿ , ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ನಿರೂಪಕರಾಗಿ ಕಳೆದ  15 ವರುಷಗಳಿಂದ ಸೇವೆ ಸಲ್ಲಿಸುತ್ತ‍ಾ ಕನ್ನಡ ಸಾಹಿತ್ಯ ,ಸಾಂಸ್ಕೃತಿಕ ,ಶೈಕ್ಷಣಿಕ ,ಸಾಮಾಜಿಕ ಮೌಲ್ಯಯುತ ಕಾರ್ಯಕ್ರಮಗಳಾದ ಕಾವ್ಯ ಕಣಜ , ನೆಲದ ಮೇಲಣ ನಕ್ಷತ್ರಗಳು , ಹಳೆಬೇರು ಹೊಸಚಿಗುರು , ಮನಸೇ ಶ್ರುತಿ ಪಲ್ಲವಿ ಇತ್ಯಾದಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ನಿರೂಪಣೆ ಮಾಡಿದ್ದಾರೆ .ಮನದ ಬಿಂಬ (ಕವನ ಸಂಕಲನ) , ಮುಂಡ್ರು (ಕಥಾ ಸಂಕಲನ) , ಅಡವಿ ದೇವಿ , ನಂದಜ್ಜನ ಕಥೆ (ನಾಟಕ )ಕೃತಿಗಳನ್ನು ಬರೆದಿದ್ದಾರೆ .ಉಡುಪಿ ಜಿಲ್ಲಾ ಮತ್ತು ಬ್ರಹ್ಮಾವರ ವಲಯ ಕವಿಗೋಷ್ಠಿಗೆ ಆಯ್ಕೆಯಾಗಿದ್ದು ,ಮಂಗಳೂರು ಉತ್ತರ ವಲಯ ಪ್ರೌಢಶಾಲಾ ಶಿಕ್ಷಕರ (ದ್ವಿತೀಯ ಭಾಷೆ ಕನ್ನಡ ) ಸಂಪನ್ಮೂಲ ವ್ಯಕ್ತಿಯಾಗಿ , ಮಂಗಳೂರು ಜಿಲ್ಲಾ( ಹತ್ತನೇ ತರಗತಿ ) ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆಯ ತಯಾರಿ , ಮಂಗಳೂರು ಮತ್ತು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಐವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ , ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮ ನಿರೂಪಣೆಯ ಮೂಲಕ ಬಹು ಬೇಡಿಕೆಯ ಕಾರ್ಯಕ್ರಮ ನಿರೂಪಕರಾಗಿದ್ದು ಇದುವರೆಗೆ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿರುತ್ತಾರೆ. ಮಂಗಳೂರು ತಾಲ್ಲೂಕು ಶಿಕ್ಷಕರ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಸಹಪಠ್ಯ ಚಟುವಟಿಕೆಗಳ ತೀರ್ಪುಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಯಕ್ಷದೀಪಾಂಜಲಿ ಯಕ್ಷಗಾನ ತಾಳಮದ್ದಲೆಯ ಸಂಘದ ಸ್ಥ‍ಾಪಕರು ಮತ್ತು ಸಂಘಟಕರು. ಉದಯವಾಣಿ , ವಿಜಯವಾಣಿ , ವಿಜಯ ಕರ್ನಾಟಕ ದಿನಪತ್ರಿಕೆಗಳಲ್ಲಿ ಕಥೆ ,ಕವನ ,ಲೇಖನವನ್ನು ಬರೆಯುತ್ತಿದ್ದಾರೆ . ತಮ್ಮ ಹದಿನೇಳು ವರುಷಗಳ ಶಿಕ್ಷಕ ವೃತ್ತಿಯಲ್ಲಿ ಸಾಹಿತ್ಯ ಮತ್ತು ಕಲೆಗಳ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ.ಪ್ರಸ್ತುತ ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article