ಕಿನ್ನಿಗೋಳಿ ಯುಗಪುರುಷದಲ್ಲಿ ಗೂಡುದೀಪ ಸ್ಪರ್ಧೆ
Friday, November 1, 2024
ಕಿನ್ನಿಗೋಳಿ: ಕಲೆಗಾರನ ವಿಭಿನ್ನ ಕಲೆಗೆ ಪ್ರೋತ್ಸಾಹ ನೀಡಲು ಹಾಗೂ ಶ್ರಮಪಟ್ಟು ಮಾಡಿದ ಕಾರ್ಯವನ್ನು ತೋರ್ಪಡಿಸಲು ಇದೊಂದು ಉತ್ತಮವೇದಿಕೆಯಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾದುದು. ಕಳೆದ ಹಲವು ವರ್ಷಗಳಿಂದ ಕಿನ್ನಿಗೋಳಿಯ ಯುಗಪುರುಷದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗೂಡುದೀಪ ಸ್ಪರ್ಧೆಯು ನಡೆಯುತ್ತಿದೆ ಎಂದು ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು. ಅವರು ಗುರುವಾರದಂದು ಕಿನ್ನಿಗೋಳಿಯ ಯುಗಪುರುಷದ ನೇತೃತ್ವದಲ್ಲಿ ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.), ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು, ಲಯನ್ಸ್ ಹಾಗೂ ಲಿಯೋ ಕ್ಲಬ್, ರೋಟರಿ ಕ್ಲಬ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಯಕ್ಷಲಹರಿ (ರಿ.), ವಿಜಯಾ ಕಲಾವಿದರು, ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಮೂಲ್ಕಿ ವಲಯ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಗೂಡುದೀಪ ಸ್ಪರ್ಧೆ ಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೂಡುದೀಪ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗದಲ್ಲಿ
ಪ್ರಥಮ : ಜನಾರ್ದನ ಬಂಗೇರಪದವು, ನಿಡ್ಡೋಡಿ
ದ್ವಿತೀಯ : ಮನೋಹರ ದೇವಾಡಿಗ, ಕವತ್ತಾರು
ತೃತೀಯ : ಧನಂಜಯ ಪೂಜಾರಿ ಕೃಷ್ಣಾಪುರ ಹಾಗೂ
ಆಧುನಿಕ ವಿಭಾಗದಲ್ಲಿ ಪ್ರಥಮ : ಉಮೇಶ್ ಕಾವೂರು,
ದ್ವಿತೀಯ : ಯಶವಂತ ಚೇಳಾರು,
ತೃತೀಯ : ದೀಪಕ್ ಚೇಳಾರು ತಂಡಗಳು ಬಹುಮಾನಗಳನ್ನು ಪಡೆದುಕೊಂಡಿತು.
ವೇದಿಕೆಯಲ್ಲಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ದಾಮೋದರ ಶೆಟ್ಟಿ, ಸುಮಿತ್ ಕುಮಾರ್, ಸುಧಾಕರ ಶೆಟ್ಟಿ, ಹಿಲ್ಡಾ ಡಿಸೋಜ, ಪೃಥ್ವಿರಾಜ್ ಆಚಾರ್ಯ, ಜಗದೀಶ ಆಚಾರ್ಯ, ವಸಂತ ಸಫಳಿಗ, ಉಷಾ ಡಿ. ಎಸ್., ಶಂಕರ ಬಿ. ಕೋಟ್ಯಾನ್, ಪ್ರಕಾಶ್ ಸುವರ್ಣ, ರಮೇಶ್ ಪೂಜಾರಿ, ರಘುನಾಥ ಕಾಮತ್, ಶರತ್ ಶೆಟ್ಟಿ, ನರೇಂದ್ರ ಕೆರೆಕಾಡು, ಪ್ರಕಾಶ್ ಆಚಾರ್, ಮೀರಾ ಶೆಟ್ಟಿ. ಅಮಿತಾ ಕೋಟ್ಯಾನ್, ರೇವತಿ, ಮಮತ, ಹೇಮಲತಾ, ಸವಿತಾ, ಶಿವಪ್ರಸಾದ್, ವೆಂಕಟೇಶ ಹೆಬ್ಬಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪದ್ಮಶ್ರೀ ಭಟ್ ಹಾಗೂ ರಮ್ಯ ಎ. ರಾವ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಾ ಕಲಾವಿದರು ತಂಡದಿಂದ ಸಂಗೀತ ರಸಮಂಜರಿ ಹಾಗೂ ಕೆಂಚನಕೆರೆ ಕುಸಾಲ್ ತಂಡದಿಂದ ಬಲೇ ತೆಲಿಪಾಲೆ
ಎಂಬ ಹಾಸ್ಯ ಕಾರ್ಯಕ್ರಮ ನಡೆಯಿತು.