ಮಾ.4 - ಮಾ.8 ಸಸಿಹಿತ್ಲು ಶ್ರೀಭಗವತೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
Tuesday, March 3, 2026
ಹಳೆಯಂಗಡಿ:ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4 ರಿಂದ ಮಾ.8ರವರೆಗೆ ಬ್ರಹ್ಮಕಲಶೋತ್ಸವವು ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಹಾಗೂ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ಯವರ ನೇತೃತ್ವದಲ್ಲಿ ವೇದಮೂರ್ತಿ ವೆಂಕಟೇಶ ತಂತ್ರಿ ಎಡಪದವು ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾ.4 ರಂದು ಬೆಳಿಗ್ಗೆ 8:30 ರಿಂದ ಋತ್ವಿಜರ ಸ್ವಾಗತ,ಮಹಾಪ್ರಾರ್ಥನೆ,ಪಂಚಗವ್ಯ ,ಪುಣ್ಯಾಹ ನಾಂದಿ,ಅರಣೀ ಮಥನ ,ದ್ವಾದಶ ನಾರೀಕೇಳಗಣಯಾಗ ಹಾಗೂ ತೋರಣಮುಹೂರ್ತವು ನಡೆಯಲಿದೆ.ಕಟೀಲು ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರವರು ದೀಪ ಪ್ರಜ್ವಲನೆ ಗೊಳಿಸಿ ಉಗ್ರಾಣ ಮುಹೂರ್ತ ನೇರವೇರಿಸಲಿದ್ದಾರೆ.ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪುಪೂಜಾರಿ,ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಬಿ.ನರಸಿಂಹ ಭಟ್,ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕ ವಾಸುದೇವ ಭಟ್,ಕದಿಕೆ ಮೋಗವೀರ ಮಹಾಸಭಾದ ಅಧ್ಯಕ್ಷ ಗಿರೀಶ್ ಶ್ರೀಯಾನ್ ,ಪಟೇಲರ ಮನೆಯ ಲೀಲಾಧರ ಬಂಗೇರ ಸಸಿಹಿತ್ಲು ಸುರತ್ಕಲ್ ಎನ್ ಐ ಟಿಕೆಯ ಪ್ರಾಧ್ಯಾಪಕ ಶ್ರೀಕಾಂತ್ ರಾವ್ ಸಸಿಹಿತ್ಲು,ಮೋಹನ್ ಶೆಟ್ಟಿಗಾರ್ ಸಸಿಹಿತ್ಲು,ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರು,ಅಧ್ಯಕ್ಷರು,ವಿವಿಧ ಸಮಿತಿಗಳ ಪದಾಧಿಕಾರಿಗಳು ,ಗಣ್ಯಾತೀಗಣ್ಯರು ಉಪಸ್ಥಿತಲಿರುವರು.
ಬೆಳಿಗ್ಗೆ 9 ಕ್ಕೆ ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಿಂದ ರಾಷ್ಟೀಯ ಹೆದ್ದಾರಿ ಮೂಲಕ ಮುಕ್ಕ ಮಾರ್ಗವಾಗಿ ಸಸಿಹಿತ್ಲುವಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆಯ ಭವ್ಯ ಮೆರವಣಿಗೆಯು ನಡೆಯಲಿದ್ದು,ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದ ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರಧಾನ ಅರ್ಚಕ ಶ್ರೀಪತಿಭಟ್,ಮುಕ್ಕ ಸತ್ಯಧರ್ಮ ದೇವಸ್ಥಾನದ ಗಣೇಶ್ ಐತಾಳ್,ಸುರತ್ಕಲ್ ಶ್ರೀಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಎಸ್.ಜಿ ಮಯ್ಯ,ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.ಮಧ್ಯಾಹ್ನ 12:30 ರಿಂದ ಮಹಾ ಅನ್ನಸಂತರ್ಪಣೆಯು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಸಂಜೆ 4:30 ರಿಂದ ವಾಸ್ತು ಪೂಜೆ,ವಾಸ್ತು ಬಲಿ ,ಪ್ರಾಸಾದ ಶುದ್ದಿ,ವಾಸ್ತುಹೋಮ,ರಾಕ್ಷೋಘ್ನ ಹೋಮ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮನವಾಗಲಿದೆ.ಸಂಜೆ 5ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ದೀಪ ಪ್ರಜ್ವಲನೆ ಗೊಳಿಸಿ ಉದ್ಘಾಟಿಸಲಿದ್ದಾರೆ.ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಗಾಣಿಗಾಪುರದ ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.ಶಾಸಕರರಾದ ರಾಜೇಶ್ ನಾಯ್ಕ್ ,ಹರೀಶ್ ಪೂಂಜಾ,ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ,ಕಿಶೋರ್ ಕುಮಾರ್ ಪುತ್ತೂರು,ಮಾಜಿ ಸಚಿವರಾದ ಅಭಯಚಂದ್ರ ಜೈನ್,ವಿನಯಕುಮಾರ್ ಸೊರಕೆ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ,ಉದ್ಯಮಿಗಳು, ಗ್ರಾ.ಪಂ ಗಳ ಅಧ್ಯಕ್ಷರುಗಳು,ಸಂಘ ಸಂಸ್ಥೆಗಳ ಪ್ರಮುಖರುಗಳು,ಗಣ್ಯಾತೀಗಣ್ಯರುಗಳು ಉಪಸ್ಥಿತಲಿದ್ದಾರೆ.ಉಳ್ಳಾಲ ಶ್ರೀಭಗವತೀ ಕ್ಷೇತ್ರದ ರವಿ ಯಾನೆ ಕಂಡಪ್ಪ ಕಾರ್ನವರು,ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು,ಮಂಗಲ್ಪಾಡಿ ಅಡ್ಕ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರು,ಸುಬ್ರಹ್ಮಣ್ಯ ಭಟ್ ಸಸಿಹಿತ್ಲು,ಮೀನಾ ಸಸಿಹಿತ್ಲು ಹಾಗೂ ರಾಘುಪೂಜಾರಿ ಸಸಿಹಿತ್ಲು ಇವರಿಗೆ ವಿಶೇಷ ಗೌರವಾರ್ಪಣೆಯು ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಂಜೆ 4 ರಿಂದ ಕೇಳ ಸುಧಾಕರ ಮತ್ತು ಬಳಗ ಮಂಗಳಾದೇವಿ ಇವರಿಂದ ಸ್ಯಾಕ್ಸೋಫೋನ್ ವಾದನ,ರಾತ್ರಿ 8 ರಿಂದ ಶ್ರೀಶಿರಿಡಿ ಸಾಯಿಬಾಬ ಮಂದಿರ ಆಶ್ರಿತ ಸಾಯಿ ಶಕ್ತಿ ಕಲಾಬಳಗ ಅರ್ಪಿಸುವ ಕದ್ರಿ ನವನೀತ್ ಶೆಟ್ಟಿಯವರ ರಚನೆಯ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ಮಾಣ ಮತ್ತು ನಿರ್ದೇಶನದ ತುಳು ಪೌರಾಣಿಕ ನಾಟಕ ಬೊಳ್ಳಿ ಮಲೆತ ಶಿವ ಶಕ್ತಿಲು ಪ್ರದರ್ಶನವಾಗಲಿದೆ.
ಮಾ. 5 ರಂದು ಬೆಳಿಗ್ಗೆ . 8.00 ರಿಂದ ಪೂರ್ಣ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಯಾಗ ,ಸಂಜೆ 4.30 ರಿಂದ ಭೂವರಾಹ ಹೋಮ, ದಿಕ್ಪಾಲಕರ ಹೋಮ, ನಾಗಸನ್ನಿಧಿಯಲ್ಲಿ ಅಶ್ಲೇಷಾ ಬಲಿ, ಆಯುತ ಕದಳೀಯಾಗದ ಪ್ರಯುಕ್ತ ಅಗ್ನಿಜನನ,ಸಂಜೆ 4 ರಿಂದ ಕಲಾವತಿ ಪ್ರೇಮ್ ನಾಥ್ ಬಳಗದವರಿಂದ ಗಾನಸುಧೆ,5 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ,ರಾತ್ರಿ 8 ರಿಂದ ಶಾರದ ಅರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರ ಅಭಿನಯದ ತುಳು ಸಾಮಾಜಿಕ ನೀತಿ ಭೋದಕ ನಾಟಕ 'ಜೈ ಭಜರಂಗ ಬಲಿ'
ಮಾ.6 ರಂದು ಬೆಳಿಗ್ಗೆ ಗಂಟೆ 7.00 ರಿಂದ : "ಆಯುತ ಕದಳೀಯಾಗ", ಗಣಯಾಗ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ,ಸಂಜೆ ಗಂಟೆ 4:00 ರಿಂದ : ಮಹಿಳಾ ವೃಂದದವರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ,ಸಂಜೆ ಗಂಟೆ 4.30 ರಿಂದ : ಶಕ್ತಿದಂಡಕ ಪೂಜೆ, ಶಾಂತಿಹೋಮ, ಆಶ್ಲೇಷಾ ಬಲಿ,ಸಂಜೆ 4:30 ರಿಂದ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ ಹರಿಕಥಾ ಕಲಾಕ್ಷೇಪ 'ಸಮುದ್ರ ಮಥನ',ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ರಾತ್ರಿ 8 ರಿಂದ ಶ್ರೀದುರ್ಗಾ ಕಲಾವಿದರು ಹೊಯಿಗೆಗುಡ್ಡೆ ಸಸಿಹಿತ್ಲು ಅಭಿನಯದ ಅದ್ದೂರಿ ತುಳು ಪೌರಾಣಿಕ ನಾಟಕ "ಬಿತ್ತ್ ಲ್ದ ಉಳ್ಳಾಲ್ದಿ ಅಪ್ಪೆ ಭಗವತೀ "
ಮಾ.7:ರಂದು ಬೆಳಿಗ್ಗೆ 7.00 ರಿಂದ ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶ, ಗಣಯಾಗ,ಸಂಜೆ 4.30 ರಿಂದ
ಬ್ರಹ್ಮಕಲಶ ಮಂಡಲ ರಚನೆ, ಕಲಶಾಧಿವಾಸ, ಅಧಿವಾಸ ಹೋಮ,ಸಂಜೆ 3:30ರಿಂದ ಪದ್ಮನಾಭ ಸಸಿಹಿತ್ಲು ಮುಂಬೈ ಬಳಗದವರಿಂದ' ಗಾನ ಸುಧೆ ',ಸಂಜೆ 5 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ರಾತ್ರಿ 7 ರಿಂದ ವಿದುಷಿ ಚಿತ್ರಾಕ್ಷೀ ಅಜಿತ್ ಕುಮಾರ್ ಬಳಗದವರಿಂದ ನೃತ್ಯರೂಪಕ ''ಶಕ್ತಿಪೀಠ",ರಾತ್ರಿ 8:30 ರಿಂದ ತ್ರಿನೇತ್ರ ಕಲಾವಿದರು ಮಂಗಳೂರು ಇವರಿಂದ ನರೇಶ್ ಕುಮಾರ್ ಸಸಿಹಿತ್ಲು ರವರ ಕಥೆ ಸಂಭಾಷಣೆ ಸಾಹಿತ್ಯ ಪರಿಕಲ್ಪನೆ ನಿರ್ದೇಶನದ ಅದ್ದೂರಿ ನಾಟಕ "ಅಕ್ಕಸದ ರಕ್ಕಸೆ"
ಮಾ.8ರಂದು ಬೆಳಿಗ್ಗೆ 7:00 ರಿಂದ ಚಂಡಿಕಾ ಯಾಗ ,ಬೆಳಿಗ್ಗೆ 11:15 ರ ವೃಷಭ ಲಗ್ನ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ,ಮಹಾ ಪೂಜೆ, ಪಲ್ಲ ಪೂಜೆ, ಸಂಜೆ 6 ರಿಂದ ದೀಪಾರಾಧನೆ, ಭಂಡಾರ ನಿರ್ಗಮನ,ಮಧ್ಯಾಹ್ನ 2:30 ರಿಂದ ಶಿವ ಪ್ರಣಾಮ್ (ರಿ) ಮೂಲ್ಕಿ.ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತ ಪಡಿಸುವ ಅನ್ನ ಪೂರ್ಣ ನಿರ್ದೇಶನದಲ್ಲಿ "ನೃತ್ಯ ವೈಭವ",ಸಂಜೆ 4 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ಸಂಜೆ 6:30 ರಿಂದ ಸಮುದ್ರ ತೀರದಲ್ಲಿ ಚಕ್ರವರ್ತಿ ಸೂಲಿ ಬೆಲೆಯವರಿಂದ ಗಂಗೆಗೆ ನುಡಿ ನಮನ,ರಾತ್ರಿ 7:30 ರಿಂದ "ಅದ್ದೂರಿ ವೈಭವದ ಗಂಗಾರತಿ ",ರಾತ್ರಿ 8:15 ರಿಂದ ಗಂಗಾ ಗಾಯನ ಕಲಾಸಿರಿ ಬಳಗ ಮಂಗಳೂರು ಖ್ಯಾತ ಗಾಯಕರಿಂದ" ಭಕ್ತಿ ಭಾವ ಗಾನ "
ಪ್ರತಿದಿನ ಭಕ್ತರಿಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರ.ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ ಎಂದು ಪ್ರಕಟಣೆ ತಿಳಿಸಿದೆ.