Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು ಬ್ರಹ್ಮಕಲಶ,ಉಗ್ರಾಣ ಮುಹೂರ್ತ ಹಾಗೂ ತೋರಣ ಮುಹೂರ್ತ

ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಇಂದಿನಿಂದ  (ಮಾ.4) ಮಾ. 8ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ  ಇಂದು ಬೆಳಿಗ್ಗೆ  ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತವು  ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ದೆ ಗುಡ್ಡೆ ಹಾಗೂ ಶ್ರೀಪತಿ ಭಟ್, ವಿದ್ವಾನ್‌ ವೆಂಕಟೇಶ ತಂತ್ರಿ ಎಡಪದವು ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ  ಅವರು ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆ ಗೊಳಿಸಿದರು.
ಸಸಿಹಿತ್ಲು  ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ,ಬಪ್ಪನಾಡು  ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅರ್ಚಕ ವಾಸುದೇವ ಭಟ್, ಸಸಿಹಿತ್ಲು ಕದಿಕೆ ಮೊಗವೀರ ಸಭಾದ ಅಧ್ಯಕ್ಷ ಗಿರೀಶ್‌ ಶ್ರಿಯಾನ್, ಲೀಲಾದರ ಬಂಗೇರ ಸಸಿಹಿತ್ಲು  ಪಟೇಲರ ಮನೆ, ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ ಶ್ರೀಕಾಂತ್ ರಾವ್‌, ಮೋಹನ್ ಶೆಟ್ಟಿಗಾರ್ ಸಸಿಹಿತ್ಲು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ,ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್‌ ಶ್ರಿಯಾನ್‌,ಪಾಕ ಶಾಸ್ತ್ರಜ್ಞ ವೆಂಕಟೇಶ್‌ ಭಟ್‌ ಪಾವಂಜೆ ಸಮಿತಿಯ ಪದಾಧಿಕಾರಿಗಳಾದ ಕಸ್ತೂರಿ ಪಂಜ,ಈಶ್ವರ ಕಟೀಲ್,ವಿನೋದ್ ಸಾಲ್ಯಾನ್ ಬೆಳ್ಳಾಯರು, ರಮೇಶ್ ಬಂಗೇರ, ಸುರೇಶ್ ಬಂಗೇರ ದಿವಾಕರ ಸಾಮಾನಿ,ಸುನಿಲ್ ಆಳ್ವ ಗುರುರಾಜ್‌ ಮಲ್ಲಿಗೆಯಂಗಡಿ, ಉಮೇಶ್ ಪಂಜ,ಕಿರಣ್ ಗುರಿಕಾರ, ದಯಾನಂದ ಮಾಡ ಎಕ್ಕಾರು, ದೊಡ್ಡಯ್ಯ ಮೂಲ್ಯ ಕಟೀಲು, ಮತ್ತಿತರರು ಉಪಸ್ಥಿತರಿದ್ದರು.