Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಕ್ಕಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸಬೇಕು - ಬಾಲಚಂದ್ರ

ಮೂಲ್ಕಿ:ಮಕ್ಕಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸುವುದರೊಂದಿಗೆ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು  ಮೂಲ್ಕಿಯ ಶ್ರೀ ನಾರಾಯಣ ಗುರು  ಶಾಲೆಯ  ಕಾರ್ಯದರ್ಶಿ  ಬಾಲಚಂದ್ರ  ಹೇಳಿದರು. ಅವರು ಮಂಗಳವಾರದಂದು  ಮೂಲ್ಕಿಯ ಶ್ರೀ ನಾರಾಯಣ ಗುರು ಶಾಲೆಯ  ಭಾರತ್ ಸ್ಕೌಟ್, ಗೈಡ್ ಸಂಸ್ಥೆಯ ಗುರುಜ್ಯೋತಿ ವಿಭಾಗದ ವತಿಯಿಂದ ಮೂಲ್ಕಿಯ ಶ್ರೀ ನಾರಾಯಣ ಗುರು ಶಾಲೆಯಲ್ಲಿ  ಆಯೋಜಿಸಲಾದ ಬೇಸಿಗೆ ಶಿಬಿರವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 
 ಮುಲ್ಕಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ  ಶ್ರೀಮತಿ ಸರೋಜಿನಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಪ್ರಾಂಶುಪಾಲ ರೋವರ್ ಲೀಡರ್   ಯತೀಶ್ ಅಮೀನ್ ಅವರು ಬೇಸಿಗೆ ಶಿಬಿರದ ಮಹತ್ವವನ್ನು ವಿವರಿಸಿದರು.
ಮುಖ್ಯೋಪಾಧ್ಯಾಯನಿ ಹಾಗೂ ಕಬ್  ಮಾಸ್ಟರ್  ಶ್ರೀಮತಿ ಗೀತಾ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆ ಯ ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ ಕೆ .ವಿ ಉಪಸ್ಥಿತರಿದ್ದರು. 
ಗೈಡ್ ಕ್ಯಾಪ್ಟನ್ ಶ್ರೀಮತಿ ರಶ್ಮಿತಾ ಸ್ವಾಗತಿಸಿದರು. ಫ್ಲಾಕ್  ಲೀಡರ್ ಶ್ರೀಮತಿ ಸುರೇಖಾ  ವಂದಿಸಿದರು.ಕಬ್ ಮಾಸ್ಟರ್ 
 ಶ್ರೀಮತಿ ವಾಣಿ ಕಾರ್ಯಕ್ರಮ ನಿರೂಪಿಸಿದರು.

  ಶಿಬಿರದಲ್ಲಿ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ಬನ್ನಿ ಆಂಟಿ ಹಾಗೂ ಗುರುಜ್ಯೋತಿ ಬನ್ನಿ, ಕಬ್, ಬುಲ್ ಬುಲ್, ಸ್ಕೌಟ್, ಗೈಡ್ ವಿಭಾಗದ ಸುಮಾರು 160 ವಿದ್ಯಾರ್ಥಿಗಳು ಭಾಗವಹಿಸಿದ್ದರು.