Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಡಾ.ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬದ ಪ್ರಯುಕ್ತ ಮಂಗಳೂರು - ಕಟೀಲು -ಕಿನ್ನಿಗೋಳಿ- ಬಳ್ಕುಂಜೆಗೆ ಉಚಿತ ಬಸ್ಸು

ಕಿನ್ನಿಗೋಳಿ : ಕರ್ನಾಟಕ ರತ್ನ ,ಪವರ್ ಸ್ಟಾರ್ ದಿ. ಡಾ.ಪುನೀತ್‌ ರಾಜ್‌ ಕುಮಾರ್‌ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಕಿನ್ನಿಗೋಳಿ-ಬಳ್ಕುಂಜೆ ಅಭಿಮಾನಿ ಬಳಗದ ವತಿಯಿಂದ ಮಂಗಳವಾರದಂದು ಮಂಗಳೂರಿನಿಂದ ಕಾವೂರು - ಬಜಪೆ - ಕಟೀಲು -  ಕಿನ್ನಿಗೋಳಿ ಬಳ್ಕುಂಜೆ  ಗೆ  ' ಪ್ರಕೃತಿ'  ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರಿಗೆ  ಬೆಳಗ್ಗಿನಿಂದ ಸಂಜೆಯವರೆಗೆ  ಟಿಕೆಟ್‌ ರಹಿತ  ಉಚಿತ ವ್ಯವಸ್ಥೆ ಯನ್ನು ಮಾಡುವ ಮೂಲಕ ದಿ.ಪುನೀತ್‌ ರಾಜ್‌ ಕುಮಾರ್‌ ರಿಗೆ ಅಭಿಮಾನಿಗಳು  ಗೌರವವನ್ನು ಸಲ್ಲಿಸಿದ್ದಾರೆ.ಕಳೆದ ವರ್ಷ ಕೂಡ ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬಕ್ಕೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಉಚಿತ ವ್ಯವಸ್ಥೆ ಯನ್ನು ಮಾಡಿದ್ದು ಈ ಬಾರಿ ಕೂಡ ಮುಂದುವರಿಸಿ ಉತ್ತಮ, ಕಾರ್ಯ ಮಾಡಿದ್ದಾರೆ.