ಮಾ.20 ರಿಂದ 24 ರ ತನಕ ಶ್ರೀಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲುವಿನಲ್ಲಿ ಕಾಲಾವಧಿ ನೇಮೋತ್ಸವ
Tuesday, March 17, 2026
ಹಳೆಯಂಗಡಿ:ಶ್ರೀಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲುವಿನಲ್ಲಿ ಕಾಲಾವಧಿ ನೇಮೋತ್ಸವವು ಮಾ.20 ರಿಂದ ಮಾ.24 ರ ತನಕ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಮಾ.20 ರ ಶುಕ್ರವಾರ ರಾತ್ರಿ 7 ಕ್ಕೆ ವಾಸ್ತುಪೂಜೆ ,ಮಾ.21 ರ ಶನಿವಾರ ಬೆಳಿಗ್ಗೆ ನಾಗದೇವರಿಗೆ ತನು ತಂಬಿಲ,ಬ್ರಹ್ಮರಿಗೆ ತಂಬಿಲ ಸೇವೆ,ರಕ್ತೇಶ್ವರೀ ದೇವಿಗೆ ಹೂವಿನ ಪೂಜೆ,ದೈವಗಳ ಶುದ್ದೀಕರಣ,ದೃಡಕಲಶ ನಡೆಯಲಿದೆ.ಸಂಜೆ 7 ಕ್ಕೆ ಕ್ಷೇತ್ರದಲ್ಲಿ ಕಾಂತುಲಕಣ ಗಡಿಪ್ರದಾನರ ಮನೆಯತಂಬಿಲ ಸೇವೆ ,ಕಾಂತಾಬಾರೆ ಬೂದಾಬಾರೆ ಯರಿಗೆ ಅನ್ನ ನೈವೆಧ್ಯ,ಅಗೇಲು ಸೇವೆ,ಮಾಣಿಬಾಲೆ ಮಾಯಾಂದಾಲ್ ಅಗೇಲು ಸೇವೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.ಮಾ.22ರ ಆದಿತ್ಯವಾರ ಸಂಜೆ 4ಕ್ಕೆ ಚಪ್ಪರ ಏರುವುದು,ಭಂಡಾರ ತರಲು ಖಂಡಿಗೆ ಬೀಡಿಗೆ ತೆರಳುವುದು.ರಾತ್ರಿ 9 ಕ್ಕೆ ಶ್ರೀ ಕ್ಷೇತ್ರ ಖಂಡಿಗೆ ಧರ್ಮರಸು ಉಳ್ಳಾಯ ಮತ್ತು ಸಹಪರಿವಾರ ದೈವಗಳ ಭಂಡಾರ ಶ್ರೀಕ್ಷೇತ್ರಕ್ಕೆ ಬರುವುದು ಮತ್ತು ಕಾಂತು ಲಕಣ ಗಡಿ ಪ್ರದಾನರ ಮನೆಯಿಂದ ದೈವಗಳ ಭಂಡಾರ ಆಗಮನ,ಧ್ವಜಾರೋಹಣ ,ಅನ್ನ ಸಂತರ್ಪಣೆ ,ಮಾ.23 ರ ಸೋಮವಾರ ಬೆಳಿಗ್ಗೆ 5ಕ್ಕೆ ಉಳ್ಳಾಯ ದೈವದ ನೇಮೋತ್ಸವ,ಇಷ್ಟದೇವತೆ,ಮೂಲ ಮಹಿಷಂದಾಯ,ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮ ಮತ್ತು ಕಾಂತಾಬಾರೆ ಬೂದಾಬಾರೆ ಯರಿಗೆ ಮಾಯಾಂದಾಲ್ ಶಕ್ತಿಗೆ ಪಂಚಕಜ್ಜಾಯ ಸೇವೆ,ಮಧ್ಯಾಹ್ನ ಅನ್ನ ಸಂತರ್ಪಣೆ ,3:30 ರಿಂದ ಓಡ್ಯಂತಾಯ ದೈವದ ನೇಮೋತ್ಸವ ,ರಾತ್ರಿ 9 ರಿಂದ ಜಾರಂದಾಯ ಬಂಟ,ಜುಮಾದಿ ಬಂಟ,ಕೊಡಮಣಿತ್ತಾಯ ,ಖಂಡಿಗೆ ಬೀಡಿನ ಕಾಂತೇರಿ ಜುಮಾದಿ ,ಪಿಲಿಚಾಮುಂಡಿ ದೈವದ ನೇಮವು ನಡೆಯಲಿದೆ.ಮಾ.24 ರ ಮಂಗಳವಾರ ಬೆಳಿಗ್ಗೆ 5 ಕ್ಕೆ ಧ್ವಜಾವರೋಹಣ ,ಕಾಂತು ಲಕಣ ಗಡಿಪ್ರದಾನರ ಮನೆಗೆ ಹಾಗೂ ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ.