Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಶ್ರೀ ವೆಂಕಟ್ರಮಣ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಾಯಶ್ಚಿತ್ತ ಮತ್ತು ಪರಿಹಾರ ಕಾರ್ಯಕ್ರಮಗಳ ಅಂಗವಾಗಿ ಭಜನಾ ಕಾರ್ಯಕ್ರಮ

ಮುಲ್ಕಿ: ಒಳಲಂಕೆ;ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಾ. 15 ರಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶದ ಅನುಸಾರ ದೇವಳದ ಸಮಗ್ರ ಜೀರ್ಣೋದ್ಧಾರದ ಪ್ರಾಯಶ್ಚಿತ್ತ ಮತ್ತು ಪರಿಹಾರ ಕಾರ್ಯಕ್ರಮಗಳ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 6.30ಕ್ಕೆ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡು ಸಂಜೆ 6.30ರ ವರೆಗೆ ಭಜನಾ ಕಾರ್ಯಕ್ರಮ  ನಡೆಯಿತು. ಸಂಜೆ 6.30ರ ನಂತರ ದೇವಳದ ಪ್ರಾಕಾರದಲ್ಲಿ ಭಜನಾ ಸಂಕೀರ್ತನೆ ಸಹಿತ 12 ಪ್ರದಕ್ಷಿಣೆಯನ್ನು ಕೈಗೊಂಡು ಭಜನೆಯ ಮಂಗಲಾಚರಣೆ ನಡೆಯಿತು
ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.