-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಅದ್ಯಪಾಡಿಯ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.15 ರಿಂದ ಮಾ.20 ರ ತನಕ  ಅಷ್ಟಬಂಧ ಬ್ರಹ್ಮಕಲಶಾಭಿಷೇಕ  ರುದ್ರಯಾಗ  ಹಾಗೂ ಸಹಸ್ರ ನಾಳಿಕೇರಮಹಾಗಣಪತಿ ಹೋಮ

ಅದ್ಯಪಾಡಿಯ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.15 ರಿಂದ ಮಾ.20 ರ ತನಕ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ರುದ್ರಯಾಗ ಹಾಗೂ ಸಹಸ್ರ ನಾಳಿಕೇರಮಹಾಗಣಪತಿ ಹೋಮ

ಬಜಪೆ:ಅದ್ಯಪಾಡಿಯ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.15 ರಿಂದ ಮಾ.20 ರ ತನಕ  ಅಷ್ಟಬಂಧ ಬ್ರಹ್ಮಕಲಶಾಭಿಷೇಕ  ರುದ್ರಯಾಗ  ಹಾಗೂ ಸಹಸ್ರ ನಾಳಿಕೇರಮಹಾಗಣಪತಿ ಹೋಮ ವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ.ಮಾ.15 ರ ಬೆಳಿಗ್ಗೆ  ಋತ್ವಿಜರ ಅಗಮನ ,ದೇವತಾ ಪ್ರಾರ್ಥನೆ  ,ಪುಣ್ಯಾಹ ನಾಂದಿ ,ಗಣಪತಿ ಹೋಮ,ತೋರಣ ಮುಹೂರ್ತ ,ಉಗ್ರಾಣ ಮುಹೂರ್ತ,ಧಾರ್ಮಿಕ ಸಭಾ ಕಾರ್ಯಕ್ರಮ,ಮಧ್ಯಾಹ್ನ ಮಹಾಪೂಜೆ ,ಅನ್ನಸಂತರ್ಪಣೆ,

ಮಧ್ಯಾಹ್ನ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ,ಸಂಜೆ ಪ್ರಾಸಾದ ಶುದ್ದಿ,ಅಂಕುರಾ ರೋಹಣ,ರಕ್ಷೋಘ್ನ ಹೋಮ,ವಾಸ್ತು ಹೋಮ ,ವಾಸ್ತು ಬಲಿ ಹಾಗೂ ಅನ್ನ ಸಂತರ್ಪಣೆ ಹಾಗೂ ಕಟೀಲು ಮೇಳದವರಿಂದ ಯಕ್ಷಗಾನ  ಶ್ರೀದೇವಿ ಮಹಾತ್ಮೆ.ಮಾ.16  ಬೆಳಿಗ್ಗೆ ಕ್ಷಾಳನಾದಿ ಬಿಂಬ ಶುದ್ದಿ,ಪ್ರೋಕ್ತ ಪ್ರಾಯಶ್ಚಿತ ಹೋಮ,ಗಣಪತಿ ಹೋಮ,ಅಷ್ಟಬಂಧ ಕ್ರಿಯೆ ,ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ,ಸಂಜೆ 6 ರಿಂದ ದುರ್ಗಾಪೂಜೆ,ಅಂಕುರ ಪೂಜೆ ,ಕುಂಡ ಶುದ್ದಿ,ಅನ್ನ ಸಂತರ್ಪಣೆ,ವಿವಿಧ ಸಂತ ಮಂಡಳಿಗಳಿಂದ ಸೂರ್ಯೋದಯದಿಂದ ಸೂರ್ಯಸ್ತಮಾನದ ತನಕ ಭಜನೋತ್ಸವ.ಮಾ.17  ಬೆಳಿಗ್ಗೆ ಪ್ರಾಯಶ್ಚಿತ ಹೋಮಗಳು,ಗಣಪತಿ ಹೋಮ,ನಾಗದೇವರಿಗೆ ನವಕ ಕಲಶಪ್ರಧಾನ ಹೋಮ,ಆಶ್ಲೇಷಾ ಬಲಿ ,ವಿವಿಧ ಭಜನಾ ಭಜನಾ ಮಂಡಳಿಗಳಿಂದ ಸಂಕೀರ್ತಣೆ,ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ,ಸಂಜೆ 6 ರಿಂದ ದುರ್ಗಾಪೂಜೆ ,ಅಂಕುರ ಪೂಜೆ,ಕುಂಡ ಶುದ್ದಿ,ಸಹಸ್ರ ನಾಳಿಕೇರ ಗಣಪತಿ ಹೋಮದ ಯಾಗಮಂಟಪದ ಶುದ್ದಿ,ಗಣಪತಿ ದೇವರಿಗೆ 49 ಕಲಶ ಪೂರಣ ಕಲಶಾಧಿವಾಸ ಅನ್ನಸಂತರ್ಪಣೆ.ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗುರುಕುಲ ಭೂಷಣ  ವಿದ್ವಾನ್ ಯುಕೆ ಪ್ರವೀಣ್ ರವರ ನಿರ್ದೇಶನದಲ್ಲಿ ಕದ್ರಿ ನೃತ್ಯ ವಿದ್ಯಾಲಯ ಚಾರಿಟೇಬಲ್ ಟ್ರಸ್ಟ್ ಕದ್ರಿ ಮಂಗಳೂರು ಇದರ ಶಿಷ್ಯ ವೃಂದದವರಿಂದ ನೃತ್ಯ ರೂಪಕ  ಭಸ್ಮಾಸುರ ಮೋಹಿನಿ ಮತ್ತು ನೃತ್ಯ ವೈವಿಧ್ಯ .ಮಾ.18 ಬೆಳಿಗ್ಗೆ 8 ರಿಂದ ಶಾಂತಿ ಹೋಮಗಳು,ರುದ್ರಯಾಗ ಪ್ರಾರಂಭ,ಗಣಪತಿ ದೇವರಿಗೆ ಕಲಶಾಭಿಷೇಕ,11:30 ರುದ್ರಯಾಗ ಪೂರ್ಣಾಹುತಿ ,ಮಹಾಪೂಜೆ ,ಅನ್ನಸಂತರ್ಪಣೆ,ಸಂಜೆ 4 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ಸಂಜೆ 6 ರಿಂದ ದುರ್ಗಾಪೂಜೆ,ಯಾಗ ಮಂಟಪದಲ್ಲಿ ಅಗ್ನಿ ಜನನ,ಕುಂಡ ಶುದ್ದಿ,ಅಂಕುರ ಪೂಜೆ ,ಅನ್ನ ಸಂತರ್ಪಣೆ ,ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಪ್ರಸನ್ನ ಶೆಟ್ಟಿ ಬೈಲೂರು ರವರ ಸಾರಥ್ಯ ಕಥೆ ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ತಂಡದವರಿಂದ ರಾಘು ಮಾಸ್ಟ್ರು ತುಳು ಹಾಸ್ಯಮಯ ನಾಟಕ.ಮಾ.19 ಬೆಳಿಗ್ಗೆ ತತ್ವ ಕಲಶ ತತ್ವಹೋಮ,ಕಲಶ ಮಂಟಪ ಸಂಸ್ಕಾರ,ಅಗ್ನಿ ಜನನ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಹೋಮಪ್ರಾರಂಭ 11:30 ಕ್ಕೆ ಪೂರ್ಣಾಹುತಿ ತತ್ವ ಕಲಶಾಭಿಷೇಕ,ಮಹಾಪೂಜೆ ಅನ್ನಸಂತರ್ಪಣೆ ,ಸಂಜೆ 4 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ಸಂಜೆ 6 ರಿಂದ ಕುಂಭೇಶ ಕರ್ಕರಿ ಪೂಜೆ,ಬ್ರಹ್ಮಕಲಶ ಪೂರಣ,500 ಪರಿಕಲಶ ಪೂರಣ,ಅಧಿವಾಸ ಹೋಮ,ಕಲಶಾಧಿವಾಸ ಅನ್ನ ಸಂತರ್ಪಣೆ ,ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಜಗದೀಶ ಆಚಾರ್ಯ ಪುತ್ತೂರು ಬಳಗದವರಿಂದ ಭಕ್ತಿ ಗಾನ ಸುಧೆ.ಮಾ.20  ಬೆಳಿಗ್ಗೆ 8 ರಿಂದ ಶ್ರೀದೇವರಿಗೆ ಪರಿಕಲಶಾಭಿಷೇಕ ಪ್ರಾರಂಭ,9:30ರಿಂದ 11 ವೃಷಭ ಲಗ್ನ ಸುಮುಹೂರ್ತದಲ್ಲಿಬ್ರಹ್ಮಕಲಶಾಭಿಷೇಕ,ಪ್ರಸನ್ನ ಪೂಜೆ ,ಮಧ್ಯಾಹ್ನ ಮಹಾಪೂಜೆ ,ಪಲ್ಲಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ,ಸಂಜೆ 4 ರಿಂದ  ಧಾರ್ಮಿಕ ಸಭಾ ಕಾರ್ಯಕ್ರಮ.ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳು ನಾಟಕ ಶಿವದೂತೆ ಗುಳಿಗೆ  ತುಳುನಾಟಕ  ನಡೆಯಲಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ