ಕಟೀಲಿನಲ್ಲಿ ರಕ್ತದಾನ ಶಿಬಿರ
Monday, March 16, 2026
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ಮಂಗಳೂರು ಕೆ.ಎಂ.ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಐವತ್ತೈದು ಮಂದಿ ರಕ್ತದಾನ ಮಾಡಿದರು.
ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಸದಸ್ಯರಾದ ದಾಮೋದರ ಶೆಟ್ಟಿ, ಧನುಷ್ ಶೆಟ್ಟಿಗಾರ್, ಪ್ರಕಾಶ್ ಆಚಾರ್, ಪ್ರಣೀಕ್ ಕೋಟ್ಯಾನ್, ಬಿಜೆಪಿ ಮುಖಂಡ ಅಭಿಲಾಷ್ ಶೆಟ್ಟಿ, ಶಿವಳ್ಳಿ ಸಭಾದ ಅನಂತಪದ್ಮನಾಭ ಆಚಾರ್ಯ, ರಾಮಚಂದ್ರ ಉಡುಪ, ಸ್ಟ್ಯಾನಿ ಪಿಂಟೋ ದೇವದಾಸ ಮಲ್ಯ, ಅಶೋಕ್ ಕೊಂಡೇಲ, ಜಿತೇಂದ್ರ ಶೆಟ್ಟಿ, ಕೆ. ಎಂಸಿ ರಕ್ತದಾನ ಘಟಕದ ಮುಖ್ಯಸ್ಥೆ ಶೆಲಿನ್ ಡಿಸೋಜ, ದಿನೇಶ್ ಕಟೀಲು ಮುಂತಾದವರಿದ್ದರು. ಸುಮಾರು ಇಪ್ಪತ್ತು ವರುಷಗಳಿಂದ ಕಟೀಲು ದೇಗುಲದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ.