-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ  ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

ಹಳೆಯಂಗಡಿ : ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8 ರವರೆಗೆ  ಯಶಸ್ವಿಯಾಗಿ ನಡೆದ ಶ್ರೀ ಭಗವತೀ ದೇವಿಯ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ ಕ್ಷೇತ್ರದ ಆವರಣದ ಬೃಹತ್ ವೇದಿಕೆಯಲ್ಲಿ ನಡೆಯಿತು 
ಸಭೆಯಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಮಾತನಾಡಿ ಕಳೆದ ಮಾರ್ಚ್ 4 ರಿಂದ 8 ರವರೆಗೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಪ್ರಮುಖವಾಗಿ ಊರಿನ ಹಾಗೂ ಮುಂಬೈ ಹಾಗೂ ದೇಶ ವಿದೇಶದ ದಾನಿಗಳು, ಸ್ವಯಂಸೇವಕರು, ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಭಕ್ತರು ಕಾರಣಕರ್ತರಾಗಿದ್ದಾರೆ.
ಭಕ್ತಿ ಹಾಗೂ ಶೃದ್ಧೆಯಿಂದ ಹಗಲು ರಾತ್ರಿ ಎನ್ನದೆ ಹಲವಾರು ಸ್ವಯಂಸೇವಕರು ನಿಷ್ಠೆಯಿಂದ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಅವರಿಗೆ ಹೃದಯ ಅಂತರಾಳದ ಧನ್ಯವಾದಗಳು  ಎಂದರು
ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಾಕಾರಗೊಳ್ಳಲು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಹತ್ವದ ಪಾತ್ರ ವಹಿಸಿದ್ದಾರೆ. ಎಲ್ಲಾ ಸಮಿತಿಗಳ ಮುಂದಾಳತ್ವ ವಹಿಸಿ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಯಶಸ್ವಿಯಾಗಿದೆ. ಬ್ರಹ್ಮಕಲಶೋತ್ಸವಕ್ಕೆ ದಾನಿಗಳ ಕೊಡುಗೆ ಮಹತ್ತರವಾಗಿದ್ದು ಎಲ್ಲಾ ಸಮಿತಿಯ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರ ಹಾಗೂ ಕೊಡುಗೆ ಅನನ್ಯ ಎಂದರು
ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಮಾರ್ಚ್ 4ರಿಂದ 8ರವರೆಗೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದೆ. ಅದರಲ್ಲೂ ಕೊನೆಯ ದಿನ ಗಂಗಾರತಿ ಕಾರ್ಯಕ್ರಮ ಅತ್ಯದ್ಭುತವಾಗಿ ನಡೆದಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲಾ ಬಂಧುಗಳಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಬಾಕ್ಸ್ ಮಾಡಬಹುದು........
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ ಮಾತನಾಡಿ ಎಪ್ರಿಲ್ 10 ಶುಕ್ರವಾರದಿಂದ  20 ರ ಸೋಮವಾರದವರೆಗೆ ದೇವಸ್ಥಾನದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏಪ್ರಿಲ್ 10ರಂದು ನಡಾವಳಿ ಉತ್ಸವ, ಎ 11 ರಿಂದ 16 ರವರೆಗೆ ಭರಣಿ ಮಹೋತ್ಸವ, ಎ.19ರಂದು ಓಂ ನಮೋ ಭಗವತೇ ವಾಸುದೇವಾಯ(ದ್ವಾದಶಾಕ್ಷರೀ ಮಂತ್ರೋಚ್ಚಾರ) ನಡೆಯಲಿದೆ 
ದಾನಿಗಳು, ಭಕ್ತಾದಿಗಳು ಗ್ರಾಮಸ್ಥರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು
ಕಾರ್ಯಕ್ರಮದಲ್ಲಿ ಕ್ಷೇತ್ರದ ಬ್ರಹ್ಮ ಕಲಶೋತ್ಸವ ಯಶಸ್ವಿಗೊಳಿಸಲು ಸಹಕರಿಸಿದ ದಾನಿಗಳನ್ನು, ಆಹಾರ್ನಿಶಿಯಾಗಿ ದುಡಿದ ವಿವಿಧ ಸಮಿತಿಯ ಪ್ರಮುಖರನ್ನು, ಕಾರ್ಯಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು 
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ  ಬೆಲ್ಚಡ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷೆ ಗೀತಾ ಪಿ ಕುಮಾರ್ ಕೋಶಾಧಿಕಾರಿ ಸುರೇಶ್ ಬಂಗೇರ,  ಸಮಿತಿಯ ಉಪಾಧ್ಯಕ್ಷ ಮುರ ಸದಾಶಿವ ಶೆಟ್ಟಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ,, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಮಾತೃ ಮಂಡಳಿಯ ಅಧ್ಯಕ್ಷೆ ಕಸ್ತೂರಿ ಪಂಜ,  ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಕಾಂತ ರಾವ್, ಮೋಹನ್ ಶೆಟ್ಟಿಗಾರ್, ಭೋಜಗುರಿಕಾರ, ಗಣೇಶ್ ಹೊಸಬೆಟ್ಟು, ಪ್ರೇಮನಾಥ ಸುವರ್ಣ, ಗಿರೀಶ್ ಶ್ರಿಯಾನ್, ಜಗನ್ನಾಥ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಕರಿತೋಟ ಸ್ವಾಗತಿಸಿದರು
 ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.(ಚಿತ್ರ ಇದೆ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ರವರನ್ನು ದಂಪತಿ ಸಮೇತ ಗೌರವಿಸಿ ಸನ್ಮಾನಿಸಲಾಯಿತು)
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ