-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಕಟೀಲು ಪದವಿ ಕಾಲೇಜಿನಲ್ಲಿ ಸಂಸ್ಕೃತ ರಾಷ್ಟ್ರೀಯ ವಿಚಾರ ಸಂಕಿರಣ

ಕಟೀಲು ಪದವಿ ಕಾಲೇಜಿನಲ್ಲಿ ಸಂಸ್ಕೃತ ರಾಷ್ಟ್ರೀಯ ವಿಚಾರ ಸಂಕಿರಣ


ಕಟೀಲು  : ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಕೇಂದ್ರ, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆಕಾಲೇಜು, ಕಟೀಲು ಇದರ ಆಶ್ರಯದಲ್ಲಿ ಸಂಸ್ಕೃತ ಶೋಧ ಸಂಸ್ಥಾನ, ಶಿರಸಿ ಹಾಗೂ ಅಖಿಲ ಕರ್ನಾಟಕ ಸಂಸ್ಕೃತ ಪರಿಷತ್ ಮಂಗಳೂರು ಇವರ ಸಹಯೋಗದೊಂದಿಗೆ ಕಟೀಲಿನಲ್ಲಿ ಮಾ.28 ಹಾಗೂ 29  ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಸಂಸ್ಕೃತ ಸಾಹಿತ್ಯದಲ್ಲಿ ನೀತಿ ಸಾಹಿತ್ಯ ಮತ್ತು  ಅದರ ಆಧುನಿಕ ಪ್ರಸ್ತುತತೆಯ ಕುರಿತು ನಡೆಯಲಿರುವ ಈ ವಿಚಾರ ಸಂಕಿರಣವನ್ನು ಪೊಳಲಿಯ ರಾಮಕೃಷ್ಣತಪೋವನ ವಿವೇಕ ಚೈತನ್ಯಾನಂದಜೀ ಉದ್ಘಾಟಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ನಾಡಿನ ಖ್ಯಾತ ವಿದ್ವಾಂಸರೂ, ಮುಂಬೈ ಐಟಿಐ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೆ. ರಾಮಸುಬ್ರಹ್ಮಣ್ಯಮ್‌ಅವರು ನೀಡಲಿದ್ದಾರೆ. ಡಾ. ಕೆ. ಸುರೇಶ್‌ರಾವ್ ಮುಂಬೈ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಬೆಂಗಳೂರಿನ ನಿವೃತ್ತಜಿಲ್ಲಾ ಸತ್ರ ನ್ಯಾಯಾಧೀಶರಾದ  ಎಂ. ದೇವರಾಜ ಭಟ್, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಡಾ. ಜಿ.ವಿ.ಜೋಶಿ, ಶಿವಮೊಗ್ಗದ ಪ್ರೊ. ಬಿ.ಎಂ. ಕುಮಾರಸ್ವಾಮಿ, ಚೆನ್ನೈ ನ ಪ್ರೊ. ಪಂಕಜಾ, ಕಟೀಲು ಕಾಲೇಜಿನ ಪ್ರಾಕ್ತನ ಪ್ರಾಂಶುಪಾಲರಾದ ಡಾ. ಜಿ.ಎನ್. ಭಟ್, ಸಂಸ್ಕೃತ ಪರಿಷತ್‌ನಡಾ. ವೆಂಕಟೇಶ್‌ಗಿರಿ ಮೊದಲಾದ ವಿದ್ವಾಂಸರು ಭಾಗವಹಿಸಲಿದ್ದಾರೆ. ಆಸಕ್ತ ಪ್ರಾಧ್ಯಾಪಕರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು ಎಂಬುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ ವಿ. ಹಾಗೂ ವಿಚಾರ ಸಂಕಿರಣದ ಸಂಯೋಜಕರಾದ ಡಾ.ಎಂ. ಪದ್ಮನಾಭ ಮರಾಠೆ ಇವರು ತಿಳಿಸಿರುತ್ತಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ