-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಕಟೀಲು ದೇಗುಲದಲ್ಲಿ ನೂತನ ರಕ್ತೇಶ್ವರೀ ಗುಡಿಯಲ್ಲಿ ಪುನಃಪ್ರತಿಷ್ಠೆ

ಕಟೀಲು ದೇಗುಲದಲ್ಲಿ ನೂತನ ರಕ್ತೇಶ್ವರೀ ಗುಡಿಯಲ್ಲಿ ಪುನಃಪ್ರತಿಷ್ಠೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವರ ಪರಿವಾರ ದೇವತೆಯಾದ ಶ್ರೀ ರಕ್ತೇಶ್ವರೀ ಗುಡಿಯನ್ನು ಬರೋಡ ಶಶಿಧರ ಶೆಟ್ಟಿ ಸೇವಾರೂಪದಲ್ಲಿ ಸುಮಾರು ರೂ.೯೦ಲಕ್ಷ ವೆಚ್ಚದಲ್ಲಿ ನವೀಕರಿಸಿ ನೀಡಿದ್ದು, ಇಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಕಲಶಾಭಿಷೇಕ ಏಪ್ರಿಲ್ ೨ರ ಗುರುವಾರ ನಡೆಯಲಿದೆ.
ಆ ಪ್ರಯುಕ್ತ ಮಾಚ್  ೩೧ರಂದು ತೋರಣ ಮುಹೂರ್ತ, ವಾಸ್ತುಪೂಜೆ, ವಾಸ್ತುಹೋಮಾದಿಗಳು ನಡೆಯಲಿದ್ದು,  ಎಪ್ರಿಲ್ ೧ರಂದು ಪ್ರಾಯಶ್ಚಿತ್ತ ಹೋಮಾದಿಗಳು, ರಕ್ತೇಶ್ವರಿಯ ಅಧಿವಾಸಹೋಮ, ಶಕ್ತಿದಂಡಕ ಮಂಡಲ ಪೂಜೆ, ತಾ. ೨ರ ಬೆಳಿಗ್ಗೆ ಕಲಶಾಧಿವಾಸ, ದುರ್ಗಾಹೋಮ, ರಕ್ತೇಶ್ವರೀ ದೇವಿಯ ಪ್ರತಿಷ್ಠೆ, ಬೆಳಿಗ್ಗೆ ಗಂಟೆ ೧೧ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಸಭಾ ಕಾರ್ಯಕ್ರಮ
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಎಂಆರ್‌ಜಿ ಸಮೂಹ ಸಂಸ್ಥೆಗಳ ಡಾ.ಕೆ.ಪ್ರಕಾಶ್ ಶೆಟ್ಟಿ, ಡಾ. ಮೋಹನ ಆಳ್ವ, ಪುಣೆಯ ಸಂತೋಷ್‌ಕುಮಾರ್ ಶೆಟ್ಟಿ, ಕಾರ್ಕಳ ಡಾ.ಸುಧಾಕರ ಶೆಟ್ಟಿ, ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜ, ನಳಿನ್ ಕುಮಾರ್, ಅಭಯಚಂದ್ರ ಜೈನ್  ಮುಂತಾದವರು ಭಾಗವಹಿಸಲಿದ್ದಾರೆ.

ರಕ್ತೇಶ್ವರೀ ಮಹತ್ವ
ಕಟೀಲು ದೇಗುಲದ ಎದುರಿನಲ್ಲಿರುವ ರಕ್ತೇಶ್ವರೀ ಸಾನ್ನಿಧ್ಯವನ್ನು ದೇಗುಲದ ಒಳ ಹೋಗುವ ಭಕ್ತರೆಲ್ಲರೂ ನಮಿಸಿಯೇ ಹೋಗುತ್ತಾರೆ. ಇಲ್ಲಿ ಒಂದು ಕಟ್ಟೆ ಇದೆ. ರಥಬೀದಿಯಲ್ಲಿ ಆಟ ಆಗುವಾಗ ಯಕ್ಷಗಾನ ಪ್ರಿಯೆ ಭ್ರಾಮರೀ ಇದೇ ಕಟ್ಟೆಯಲ್ಲಿ ಕೂತು ಯಕ್ಷಗಾನ ನೋಡುತ್ತಾಳೆ ಎಂಬ ನಂಬಿಕೆ. ನಿಗ್ರಹ ಶಕ್ತಿಯುಳ್ಳ ರಕ್ತೇಶ್ವರೀ ಸಾನ್ನಿಧ್ಯದಲ್ಲಿ ದಿನಂಪ್ರತಿ ಎರಡು ಸಲ ಅಜೆಕಾಯಿ ಸೇವೆ, ಸಂಕ್ರಮಣಕ್ಕೆ ಪರ್ವ ನಡೆಯುತ್ತದೆ.
ರಕ್ತೇಶ್ವರೀ ಸಾನ್ನಿಧ್ಯ ಇರುವ ಇದೇ ಬಂಡೆಕಲ್ಲಿನಲ್ಲಿ ದುರ್ಗಾಪರಮೇಶ್ವರೀ ಭ್ರಮರರೂಪ ತಾಳಿ ಅಡಗಿ ಕೂತಳು. ಆಗ ಅರುಣಾಸುರ ಕತ್ತಿಯಲ್ಲಿ ಬಂಡೆಗೆ ಹೊಡೆದಾಗ, ಒಡೆದ ಬಂಡೆಯೊಳಗಿಂದ ಹೊರಬಂದ ಜಗನ್ಮಾತೆ ದುರುಳ ಅರುಣನನ್ನು ತರಿದಳು ಎಂದು ಕಥೆಯಿದೆ. ಕಟೀಲು ಕ್ಷೇತ್ರ ಮಾಹಾತ್ಮ್ಯೆ ಪ್ರಸಂಗದಲ್ಲಿ ಭ್ರಮರ ವೇಷ ಬರುವಾಗ ಇದೇ ಬಂಡೆಯ ಚಿತ್ರವನ್ನು ಇರಿಸಲಾಗುತ್ತದೆ. ಈ ಬಂಡೆ ಕಲ್ಲಿನ ಚಿತ್ರಕ್ಕೆ ಅರುಣಾಸುರ ವೇಷಧಾರಿ ಖಡ್ಗದಿಂದ ಹೊಡೆದಾಗ ಭ್ರಾಮರಿ ಹೊರಬರುವುದನ್ನು ಕಾಣಬಹುದಾಗಿದೆ.  

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ