Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆದ್ಯಪಾಡಿ ದೈವಂಗಳ ಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ

ಬಜಪೆ : ಆದ್ಯಪಾಡಿ  ದೈವಂಗಳ ಗುಡ್ಡೆ  ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ, ಪವಿತ್ರಪಾಣಿ ವೇದಮೂರ್ತಿ ಎ.ರಮೇಶ್ ಉಡುಪ ಮತ್ತು ಅರ್ಚಕ ಕೃಷ್ಣ ಭಟ್ ಅವರ ಸಹಯೋಗದಲ್ಲಿ   ಪೂರ್ವಾಹ್ನ 9:30ರಿಂದ 11ರ ಸಮಯದ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವರಿಗೆ ಅಷ್ಟ ಬಂಧ ಬ್ರಹ್ಮಕಲಶಾಭಿಷೇಕವು ಜರಗಿತು.ಬೆಳಿಗ್ಗೆ 8 ಗಂಟೆಗೆ  ಶ್ರೀ ದೇವರಿಗೆ ಪರಿಕಲಶಾಭಿಷೇಕದೊಂದಿಗೆಬ್ರಹ್ಮಕಲಶಾಭಿಷೇಕದ ವಿಧಿಗಳು ಪ್ರಾರಂಭವಾದವು.ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಪಲ್ಲಪೂಜೆಯ ಬಳಿಕ ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ,ಕೆ. ಶ್ರೀಧರ್ ಆಳ್ವ, ಕಂದಾವರ ಬಾಳಿಕೆ,ಶಿವರಾಮ್ ಮಲ್ಲಿ, ಅರ್ಬಿ ಶೆಡ್ಡೆ,ರಾಜೇಶ್ ಚೌಟ 
ಸುಜೀರ್ ಗುತ್ತು, ರಾಜಲಕ್ಷ್ಮಿ ಎಜುಕೇಷನ್ ಟ್ರಸ್ಟ್,
ಶಶಿ ಕಿರಣ್ ಶೆಟ್ಟಿ ಆಲ್ ಕಾರ್ಗೋಮುಂಬೈ,ಉದಯಚಂದ್ರ ಭಂಡಾರಿ, ಶೆಡ್ಡೆ ಹೊಸಮನೆ,ಸುಜಿತ್ ಆಳ್ವ, ಏತಮೊಗರುಗುತ್ತು,ಹರಿಪ್ರಸಾದ್ ರೈ, ಬೆಳ್ಳಿಪಾಡಿ,
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ
ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು.
ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ ಬೈಲುಮೇಗಿನ ಮನೆ,ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಬೈಲು ಮೂಡುಕರೆ.
ರವಿರಾಜ್ ಶೆಟ್ಟಿ ನಿಟ್ಟೆಗುತ್ತು, 
ಕೃಷ್ಣಮೂರ್ತಿ, ಅಡ್ಯಾರ್‌ಕಟ್ಟೆ
ದಿವಾಕರ ಸಾಮಾನಿ,ಚೆಳಾರು ಗುತ್ತು.
ಸತೀಶ್ ಆಳ್ವ ಬೈಲು ಮೂಡುಕರೆ,
ಸಂತೋಷ್ ಶೆಟ್ಟಿ, ಶೆಡ್ಡೆ ಹೊಸಲಕ್ಕೆ
ಪ್ರಭಾಕರ ಶೆಟ್ಟಿ ಕಡೆಗುಂಡ್ಯ.
ಸಂಜಿತ್ ಶೆಟ್ಟಿ ಬೈಲು ಮೂಡುಕರೆ,ಮುರಳೀಧರ್ ರಾವ್, ಅದ್ಯಪಾಡಿ,ಸುಜೀರ್ ಕುಮಾ‌ರ್ ಶೆಟ್ಟಿ, ಇನ್ನದಗುತ್ತು.
ಭುಜಂಗ ಕುಲಾಲ್ ಆದ್ಯಪಾಡಿ.
ಜಯರಾಮ ಕೊಟ್ಟಾರಿ, ಶೆಡ್ಡೆ.
ದಿನೇಶ್ ಮಾರ್ತ, ಬೈಲುಮೂಡುಕರೆ.
ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ.
ದೇವದಾಸ್ ನಾಯಕ, ಯಜಮಾನ ಬೈಲುಮೂಡುಕರೆ, 
ಶ್ರೀ ನೀಲಕಂಠ ಉಮಾಮಹೇಶ್ವರ ಟೆಂಪಲ್ ಟ್ರಸ್ಟ್(ರಿ.), ಬೈಲುಮೂಡುಕರೆ ಕುಟುಂಬಸ್ಥರು ಮತ್ತು ಬಂಧುಗಳು, ಸರ್ವ ಸಮಿತಿಯ ಪದಾಧಿಕಾರಿಗಳು ಮತ್ತು ಬೈಲುಮಾಗಣೆಯ ಹತ್ತು ಸಮಸ್ತರು, ಭಕ್ತರು ಇದ್ದರು.