ನಾಳೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ಕ್ಷೇತ್ರದಲ್ಲಿ ಬ್ರಹ್ಮಕಲಶ
Saturday, February 7, 2026
ಹಳೆಯಂಗಡಿ:ಸಸಿಹಿತ್ಲುವಿನ ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದಲ್ಲಿ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಫೆ.4 ರಿಂದ ಮೊದಲ್ಗೊಂಡು ಫೆ.10 ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ನಡೆಯಲಿರುವುದು.
ಹಳೆಯಂಗಡಿ ಶ್ರೀವೇದಮೂರ್ತಿ ಎಚ್.ರಂಗನಾಥ ಭಟ್ ರವರ ನೇತೃತ್ವದಲ್ಲಿ ಋತ್ವಿಜರ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಆದಿತ್ಯವಾರದಂದು ಬೆಳಿಗ್ಗೆ 6 ರಿಂದ ಸ್ವಸ್ತಿ ಪುಣ್ಯಾಹ ಗಣಹೋಮ,ಪ್ರತಿಷ್ಠಾ ಹೋಮ,ಶಕ್ತಿ ಪಂಚಾಕ್ಷರಿ ಹೋಮ,ಸಾಮೂಹಿಕ ಪ್ರಾರ್ಥನೆ ,ಶಿಖರ ಪ್ರತಿಷ್ಠೆ,8:30 ರ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಪ್ರಸನ್ನ ಪೂಜೆ,ಕೊಡಿಯಡಿ ಏರುವುದು,ದೈವದರ್ಶನ,ಧ್ವಜಾರೋಹಣ,ಭಂಡಾರವನ್ನು ಕೊಡಿಯಡಿಗೆ ತರುವುದು,ಪ್ರಸಾದ ವಿತರಣೆ ,ಪಲ್ಲಪೂಜೆ ,ಬ್ರಹ್ಮಕಲಶೋತ್ಸವ ಬ್ರಹ್ಮ ತೀರ್ಥ ವಿತರಣೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ 12 ರಿಂದ ಸಂಜೆ 4 ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಸಂಜೆ 4 ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಹಾಸ್ಯ ಸಂಭ್ರಮ ಹಾಗೂ ರಾತ್ರಿ 8:30 ರಿಂದ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಉರ್ವ ಇವರಿಂದ ಅದ್ದೂರಿ ತುಳು ಜನಪದ ಸಿನಿ ನಾಟಕ ಸತ್ಯೊದ ಸಾದಿಗ್ ಧರ್ಮೊದ ಬೊಲ್ಪು ಜೋಡು ಜೀಟಿಗೆ ಪ್ರದರ್ಶನಗೊಳ್ಳಲಿದೆ.ಸಂಜೆ 6 ರಿಂದ ಸಭಾ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು,ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್,ಮುಂಬಾಯಿ ಅಂತರ ರಾಷ್ಟ್ರೀಯ ಜ್ಯೋತಿಷಿ ಡಾ.ಎಮ್.ಜಿ ಭಟ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.ಮುಲ್ಕಿ ಸೀಮೆ ಅರಸರಾದ ಶ್ರೀದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.,ಮಹಾಕಾಳಿ ಮಹಾ ಸಂಸ್ಥಾನ ಸಧರ್ಮ ,ಓಂ ಶಕ್ತಿ ಪೀಠ ನಿಪ್ಪಾಣಿಯ ಮಠಾಧಿಪತಿಗಳಾದ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಲಿದ್ದಾರೆ.ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ಸಚಿವರಾದ ದಿನೇಶ್ ಗುಂಡೂರಾವ್ ,ಮಧು ಬಂಗಾರಪ್ಪ,ಮಾಜಿ ಸಚಿವ ಅಭಯಚಂದ್ರ ಜೈನ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಶಾಸಕ ಬೇಲೂರು ಗೋಪಾಲಕೃಷ್ಣ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಮ್ .ಎನ್ ರಾಜೇಂದ್ರ ಪ್ರಸಾದ್,ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಮುಖ್ಯಸ್ಥ ಸೂರ್ಯಕಾಂತ್ ಜೆ.ಸುವರ್ಣ,ಹೇರಂಭ ಇಂಡಸ್ಟೀಸ್ ನ ಚೇರ್ ಮೆನ್ ಡಾ.ಸದಾಶಿವ ಶೆಟ್ಟಿ ಕನ್ಯಾನ,ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಅನೇಕ ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.