-->
ಮೂಲ್ಕಿ ಬಾಲಿಕಾಶ್ರಮದಲ್ಲಿ "ಅಮ್ಮನ ಆಸರೆ* ವಿಶಿಷ್ಟ ಸಂಭ್ರಮ

ಮೂಲ್ಕಿ ಬಾಲಿಕಾಶ್ರಮದಲ್ಲಿ "ಅಮ್ಮನ ಆಸರೆ* ವಿಶಿಷ್ಟ ಸಂಭ್ರಮ

ಮೂಲ್ಕಿ  : ಹೆತ್ತ ತಾಯಿಯ ಋಣವನ್ನು ನಮ್ಮ ಆತ್ಮಸ್ಥೈರ್ಯವನ್ನಾಗಿ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳೋಣ, ನೋವನ್ನು ಪಡೆದುಕೊಂಡು ಪ್ರೀತಿಯನ್ನು ಹಂಚುವ ಅಮ್ಮನ ಅಸರೆಯನ್ನು ವಿಶ್ವಾಸಕ್ಕೆ ಪರಿವರ್ತಿಸಿಕೊಳ್ಳುವುದೇ ಮಾನವನ ಧರ್ಮವಾಗಬೇಕು. ಉಸಿರಿನ ಕೊನೆಯವರೆಗೂ ತಾಯಿಯನ್ನು ಕಣ್ಣಮುಂದೆಯೇ ಸಾಕು ಸಲಹುವುದು ಮಕ್ಕಳ ಕರ್ತವ್ಯ  ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ನುಡಿದರು.  
ಅವರು ಮೂಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಯೋಜನೆಯಲ್ಲಿ ನಡೆದ "ಅಮ್ಮನ ಆಸರೆ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ  ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರು ವಿಶೇಷವಾಗಿ "ಅಮ್ಮನ ಆಸರೆ" ಸರಣಿ ಕಾರ್ಯಕ್ರಮವನ್ನು ಸಂಯೋಜಿಸಿ,  ಎಲ್ಲಾ ಮಕ್ಕಳಿಗೆ ದೈನಂದಿನ ವಸ್ತುಗಳನ್ನು ವಿತರಿಸಿ, ಮೂಲ್ಕಿಯ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು  ಹಾಗೂ ಸೂಕ್ತವಾದ ಸ್ಪಂದನೆಯನ್ನು ಸೇವಾಶ್ರಮದ ಮೂಲಕ ನಡೆಸುವ ಭರವಸೆ ನೀಡಿದರು.  
ಶಾರದಮ್ಮ ಗೋವಿಂದ ಭಟ್, ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಆಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ