ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವ,ಸನ್ಮಾನ
Monday, December 22, 2025
ಕಿನ್ನಿಗೋಳಿ:ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವದ ಸಂದರ್ಭದಲ್ಲಿ ಭಜನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ
ಶ್ರೀಧರ್ ಪಂಜ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪಂಜ ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕ ಸುರೇಶ್ ಭಟ್ ಪಂಜ, ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ಸತೀಶ್ ಶೆಟ್ಟಿ ಪಂಜದಗುತ್ತು,
ರಘುರಾಮ್ ಶೆಟ್ಟಿ, ಚಂದ್ರಹಾಸ ಎಂ. ಶೆಟ್ಟಿ, ಸೀತಾರಾಮ್ ಅಮೀನ್, ಮುಂಬೈ ಸಮಿತಿಯ ಪ್ರಕಾಶ್ ಶೆಟ್ಟಿ ನಲ್ಯಗುತ್ತು,
ರಮೇಶ್ ಶೆಟ್ಟಿ, ಬಾಕಿಮಾರು ಗುತ್ತು ಸೀತಾರಾಮ್ ಶೆಟ್ಟಿ ಪಂಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯ ಕೇಶವ ಪೂಜಾರಿ, ಪದ್ಮನಾಭ ಪೂಜಾರಿ,
ನವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಗುರು ರಕ್ಷಿತ್ ಪಡ್ರೆ ಯವರ ತಾಯಿ ಗೀತಾ ರತ್ನಾಕರ ಶೆಟ್ಟಿ ರವರನ್ನು ಈ ವೇಳೆ ಗೌರವಿಸಲಾಯಿತು.
ಪ್ರಮೋದ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.ಸತೀಶ್ ಶೆಟ್ಟಿ ಬೈಲಗುತ್ತು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನೃತ್ಯ ಶ್ರೀ ವಿಠೋಬ ಯಕ್ಷ ನೂಪುರ ನಾಟ್ಯ ಕಲಾ ಕೇಂದ್ರ ಮಕ್ಕಳಿಂದ ರಂಗಪ್ರವೇಶ ಹಾಗೂ "ಶ್ರೀರಾಮ ಕಾರುಣ್ಯ" ಯಕ್ಷಗಾನ ಪ್ರದರ್ಶನ ನಡೆಯಿತು.