ಕಾರ್ಕಳ ಆನೆಕೆರೆಯ ಪಂಡಿತ್ ಸಂಜೀವ ಕೋಟ್ಯಾನ್ ನಿಧನ
Monday, December 22, 2025
ಮುಂಡ್ಕೂರು : ಮುಂಡ್ಕೂರು ಪದವಿ ಪೂರ್ವ ಕಾಲೇಜಿನ ನಿವೃತ್ತ ಕಚೇರಿ ಸಿಬ್ಬಂದಿ ಬೆರಳಚ್ಚುಗಾರ ಮತ್ತು ವಾಚನಾಲಯ ಅಧಿಕಾರಿಯಾಗಿದ್ದ ಕಾರ್ಕಳ ಆನೆಕೆರೆಯ ನಿವಾಸಿ ಪಂಡಿತ್ ಸಂಜೀವ ಕೋಟ್ಯಾನ್ (78)
ಶನಿವಾರ (ಡಿ.20)ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಾರ್ಕಳ ಪರಿಸರದಲ್ಲಿ ಮೃದು ಮಾತಿನಿಂದಲೇ ಪ್ರವೃತ್ತಿಯಲ್ಲಿ ಆಯುರ್ವೇದ ಔಷಧಿಯನ್ನು ನೀಡುತ್ತಾ ಮನೆ ಮಾತಾಗಿದ್ದರು. ಯಕ್ಷಗಾನ ವೇಷಧಾರಿಯಾಗಿಯೂ ಗುರುತಿಸಿಕೊಂಡಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಭಾನುವಾರ (ಡಿ. 21) ಮೂಲ್ಕಿ ಕಾರ್ನಾಡಿನ ಪುತ್ರಿಯ ಮನೆಯಲ್ಲಿರಿಸಿ, ಮೂಲ್ಕಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಅವರ ಬಂಧು ಬಳಗ ಸೇರಿದ್ದರು.