-->
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು,ಕಟೀಲು -  ಎಕ್ಕಾರು ಘಟಕದ ದಶಮಾನೋತ್ಸವ,ಸಾಧಕರಿಗೆ ಸನ್ಮಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು,ಕಟೀಲು - ಎಕ್ಕಾರು ಘಟಕದ ದಶಮಾನೋತ್ಸವ,ಸಾಧಕರಿಗೆ ಸನ್ಮಾನ

ಬಜಪೆ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ,ಕಟೀಲು - ಎಕ್ಕಾರು ಘಟಕದ ದಶಮಾನೋತ್ಸವ ಕಾರ್ಯಕ್ರಮ  ಎಕ್ಕಾರು ಬಂಟರ ಭವನದ ಆವರಣದಲ್ಲಿ  ಶುಕ್ರವಾರ ಸಂಜೆ ನಡೆಯಿತು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಯಕ್ಷಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು, ದೇವಿ ಭಟ್ರು ಖ್ಯಾತಿಯ ಬಾಯಾರು ರಮೇಶ್ ಭಟ್ ,ಸಾಹಿತಿ ಹಾಗೂ  ಸಾಧಕಿ ದಯಾಮಣಿ ಶೆಟ್ಟಿ ಇವರನ್ನು ಗೌರವಿಸಲಾಯಿತು. ಈ ಸಂದರ್ಭ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಕಟೀಲು - ಎಕ್ಕಾರು ಘಟಕದ ಗೌರವಾಧ್ಯಕ್ಷ ದಿವಾಕರ್ ರಾವ್ ಸಿತ್ಲ, ಎಕ್ಕಾರು ಬಂಟರ ಸಂಘದ ಅಧ್ಯಕ್ಷ  ರತ್ನಾಕರ ಶೆಟ್ಟಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಸಿ ಎ  ಸುದೇಶ್ ಕುಮಾರ್ ರೈ,ಕಟೀಲು - ಎಕ್ಕಾರು ಘಟಕದ ಅಧ್ಯಕ್ಷ  ಗಿರೀಶ್ ಎಂ. ಶೆಟ್ಟಿ  ಉಪಸ್ಥಿತರಿದ್ದರು.ಬಳಿಕ  ಪಾವಂಜೆ ಮೇಳದವರಿಂದ ಛಾಯಾನಂದನ ಯಕ್ಷಗಾನ ಪ್ರದರ್ಶನ ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ