ಅಜಾರು ಶ್ರೀಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ
Tuesday, December 23, 2025
ಕಟೀಕು:ಕಟೀಲು ಸಮೀಪದ ಅಜಾರು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ವಿಜೃಂಭಣೆಯಿಂದ ಜರುಗಿತು. ಈ ನೇಮೋತ್ಸವದಲ್ಲಿ ಬೆಂಕಿಯಾಟ ಅನ್ನುವಂತಹ ವಿಶೇಷ ಆಚರಣೆ ನಡೆಯುತ್ತದೆ ಇಲ್ಲಿ ಬಂಟ ದೈವ ಮತ್ತು ಊರಿನ ಗ್ರಾಮಸ್ಥರ ಮಧ್ಯೆ ಬೆಂಕಿಯ ಆಟ ನಡೆಯುತ್ತದೆ. ಊರಿನ ನಾಲ್ಕು ಗುರಿಕಾರರ ಮನೆಯಿಂದ ಒಣಗಿದ ತೆಂಗಿನ ಗರಿಯಿಂದ ತಯಾರಿಸಿದಂತ ತೂಟೆಯನ್ನು ತರಿಸಲಾಗುತ್ತದೆ. ಶ್ರೀ ಧೂಮಾವತಿ ದೈವದ ಅಪ್ಪಣೆಯನ್ನು ಪಡೆದು ಈ ತಂಗಿನ ಗರಿಯಿಂದ ತಯಾರಿಸಿದ ತೂಟೆಗಳಿಗೆ ಬೆಂಕಿಯನ್ನು ಹಚ್ಚಲಾಗುತ್ತದೆ. ನಂತರ ಬಂಟ ದೈವ ಮತ್ತು ಅಜಾರು ಗ್ರಾಮಸ್ಥರ ಮಧ್ಯೆ ಈ ಬೆಂಕಿ ಆಟ ನಡೆಯುತ್ತದೆ ಈ ಬೆಂಕಿಯಿಂದ ತಯಾರಿಸಿದ ತೂಟೆಯನ್ನು ಬಂಟದೈವವೂ ಊರಿನ ಯುವಕರಿಗೆ ಬಿಸಾಡುವುದರ ಮೂಲಕ ಈ ಆಚರಣೆಯು ಪ್ರಾರಂಭಗೊಳ್ಳುತ್ತದೆ. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಊರಿಗೆ ಬಂದಂತಹ ರೋಗ ರುಜಿನಗಳು, ದುರಿತ ದುಮ್ಮಾನಗಳನ್ನ ಓಡಿಸುವುದು ಎಂಬಂತಹ ಅನಾದಿಕಾಲದಿಂದ ಬಂದಂತಹ ನಂಬಿಕೆ.