ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಮುಲ್ಕಿ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ಲೋಕೇಶ್ ಸುರತ್ಕಲ್ ಅವಿರೋಧ ಆಯ್ಕೆ
Thursday, December 25, 2025
ಮೂಲ್ಕಿ : ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಮುಲ್ಕಿ ತಾಲೂಕು ಘಟಕಕ್ಕೆ ಲೋಕೇಶ್ ಸುರತ್ಕಲ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಿಥುನ್ ಕೊಡೆತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಕೃಷ್ಣ, ಕಾರ್ಯದರ್ಶಿಯಾಗಿ ರಘುನಾಥ ಕಾಮತ್ ಕೆಂಚನಕೆರೆ ಹಾಗೂ ಕೋಶಾಧಿಕಾರಿಯಾಗಿ ಶರತ್ ಶೆಟ್ಟಿ ಕಿನ್ನಿಗೋಳಿ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಭಾಗ್ಯವಾನ್ ಸನೀಲ್, ಯಶೋಧರ ಕೋಟ್ಯಾನ್, ರಾಕೇಶ್ ಪೂಜಾರಿ, ನಿರಂಜನ್ ಕೃಷ್ಣಾಪುರ ಮತ್ತು ನಿಶಾಂತ್ ವಿ ಶೆಟ್ಟಿ ಅವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂಲ್ಕಿ ತಾಲೂಕು ಘಟಕದ ಈ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಸಂದೇಶ್ ಜಾರ ಹಾಗೂ ಉಪಚುನಾವಣಾಧಿಕಾರಿಯಾಗಿ ಸಂದೀಪ್ ಕುಮಾರ್ ಎಮ್. ಅವರು ಯಶಸ್ವಿಯಾಗಿ ನಿರ್ವಹಿಸಿದರು.