-->
ಮಾರ್ಲಚ್ಚಿಲ್ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾಗಿ ರಾಮಯ್ಯ ಟಿ ಶೆಟ್ಟಿ ಕೊಯಿಕುಡೆ ಆಯ್ಕೆ

ಮಾರ್ಲಚ್ಚಿಲ್ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾಗಿ ರಾಮಯ್ಯ ಟಿ ಶೆಟ್ಟಿ ಕೊಯಿಕುಡೆ ಆಯ್ಕೆ


ಪಕ್ಷಿಕೆರೆ: ಹರಿಪಾದೆ ಧರ್ಮ ದೈವ ಜಾರಂದಾಯ  ದೈವಸ್ಥಾನಕ್ಕೆ ಸಂಬಂಧಪಟ್ಟ ಮಾರ್ಲಚ್ಚಿಲ್ ದೈವಸ್ಥಾನದ  ಜೀರ್ಣೋದ್ಧಾರ ಕಾರ್ಯವು ನಡೆಯಲಿದ್ದು,ಆ ಪ್ರಯುಕ್ತ  ಊರ  ಪರವೂರಿನ ಹತ್ತು ಸಮಸ್ತರ  ಸಭೆಯು ಹರಿಪಾದೆ ಧರ್ಮ ದೈವ ಜಾರಂದಾಯ  ದೈವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ  ನಲ್ಯಗುತ್ತು ಪ್ರಕಾಶ್ ಟಿ .ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಮಾರ್ಲಚ್ಚಿಲ್  ಪಂಜುರ್ಲಿ ದೈವಸ್ಥಾನ ಜೀರ್ಣೋದ್ಧಾರದ ಗೌರವಾಧ್ಯಕ್ಷರಾಗಿ ನಲ್ಯಗುತ್ತು ಪ್ರಕಾಶ್.ಟಿ.ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಮಯ್ಯ.ಟಿ. ಶೆಟ್ಟಿ  ಶ್ರೀ ಹರಿ ನಿವಾಸ ಕೊಯಿಕುಡೆ,ಉಪಾಧ್ಯಕ್ಷರಾಗಿ ಹರಿಪಾದೆ ಸಾನದ ಭಂಡಾರ ಮನೆ ಮಾಧವ ಸಾಲ್ಯಾನ್ ,ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಭಟ್ ಶ್ರೀಶೈಲ ಕೊಯಿಕುಡೆ, ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ಕುಕ್ಯಾನ್ ಮೊಗಪಾಡಿ ಹರಿಪಾದೆ, ಕೋಶಾಧಿಕಾರಿಯಾಗಿ  ಹರೀಶ್ ದೇವಾಡಿಗ ಹರಿಪಾದೆ ಯವರು  ಆಯ್ಕೆಯಾದರು.
ನಿರಂಜನ್ ಎಸ್ ಬಂಗೇರ ಸ್ವಾಗತಿಸಿದರು. ನವೀನ್ ಕುಮಾರ್ ಸಾನದ ಭಂಡಾರ ಮನೆ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ