ಯುವ ಜೇನುಕೃಷಿಕ ಪ್ರಜ್ವಲ್ ಎಂ ಕಿನ್ನಿಗೋಳಿ , ಜೇನು ಮೇಣದಿಂದ ತಯಾರಿಸಿದ ಚೆಸ್ ಬೋರ್ಡ್ "INDIA BOOK OF RECORD " ಗೆ ಸೇರ್ಪಡೆ
Monday, December 15, 2025
ಕಿನ್ನಿಗೋಳಿ:ಜಿಕೆವಿಕೆ ಬೆಂಗಳೂರು ವತಿಯಿಂದ ನಡೆದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಜೇನು ವಿಭಾಗದ ಪ್ರದರ್ಶನದಲ್ಲಿ ಯುವ ಜೇನುಕೃಷಿಕ ಪ್ರಜ್ವಲ್ ಎಂ ಕಿನ್ನಿಗೋಳಿ ಇವರು ಜೇನು ಮೇಣದಿಂದ ತಯಾರಿಸಿದ ಚೆಸ್ ಬೋರ್ಡ್ "INDIA BOOK OF RECORD " ಪುಟ ಸೇರಿದೆ.
ಭಾರತದಲ್ಲಿ ಮೊದಲ ಭಾರಿಗೇ ಜೇನುಮೇಣದಿಂದ ಚೆಸ್ ಬೋರ್ಡ್ ತಯಾರಿಸಿದ ಕೀರ್ತಿ ಸುನೀತ ಮಾಧವ ಶೆಟ್ಟಿಗಾರ್ ರವರ ಪುತ್ರ ಪ್ರಜ್ವಲ್ ಎಂ ಅವರದ್ದಾಗಿದೆ .
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಯ ನಿವಾಸಿಯಾಗಿರುವ ಅವರು 6 ವರ್ಷದಿಂದ ಜೇನುಕೃಷಿಯಲ್ಲಿ ತೊಡಗಿದ್ದು ಜೇನುಕೃಷಿಯಲ್ಲಿ 25 ಕ್ಕೂ ಹೆಚ್ಚಿನ ಮೌಲ್ಯವರ್ಧನೆ , ಜೇನುಕೃಷಿಯಲ್ಲಿ ಸಂಶೋಧನೆ , ಶಾಲಾ ಮಕ್ಕಳಿಗೆ ಶಿಕ್ಷಣ, ಜೇನುಕೃಷಿ ತರಬೇತಿಯನ್ನು ತನ್ನ ಕಿರಿಯ ಪ್ರಾಯದಲ್ಲಿಯೇ ಆರಂಭಿಸಿದ್ದಾರೆ. ಜೇನುಕೃಷಿಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಆ. 30 .2025 ರಂದು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ ಪಡೆದಿರುತ್ತಾರೆ. ಇದೀಗ ಮತ್ತೊಮ್ಮೆ ಜೇನುಕೃಷಿಯಲ್ಲಿ Book of record ನ ಮೂಲಕ ಹೊಸ ಮೈಲಿಗಲ್ಲು ಪಡೆದಿರುವ ಇವರು ತಮ್ಮ ಎಳೆಯ ಪ್ರಾಯದಲ್ಲಿಯೇ ಜೇನುಕೃಷಿಯಲ್ಲಿ ಮಾಡಿರುವ ಸಾಧನೆ ಪ್ರಶಂಸನೀಯ.