ಮಕ್ಕಳು ಉತ್ತಮ ಶಿಕ್ಷಣದ ಮೂಲಕ ಸಂಸ್ಕಾರಯುತವಾಗಿ ಬೆಳೆಯಬೇಕು - ಐಕಳ ಹರೀಶ್ ಶೆಟ್ಟಿ
Monday, December 15, 2025
ಮೂಲ್ಕಿ:ಮಕ್ಕಳು ಉತ್ತಮ ಶಿಕ್ಷಣದ ಮೂಲಕ ಸಂಸ್ಕಾರಯುತವಾಗಿ ಬೆಳೆದು, ಶಿಕ್ಷಕರಿಗೂ ಪೋಷಕರಿಗೂ ವಿಧೇಯರಾಗಿ ಸಮಾಜಕ್ಕೆ ಕೀರ್ತಿ ತರಬೇಕು ಎಂದು ವಿಶ್ವ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ಶ್ರೀ ನಾರಾಯಣ ಗುರು ಶಾಲೆಯ 46ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಲಿತಾ ಆರ್. ಸಾಲ್ಯಾನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ್ ಎಂ. ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಉದ್ಯಮಿ ಧೀರಜ್ ಹೆಜಮಾಡಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡೀಕುದ್ರು,
ಮೂಲ್ಕಿ ನಾರಾಯಣಗುರು ಶಾಲಾ ಸಂಚಾಲಕ ಹರೀಂದ್ರ ಸುವರ್ಣ, ಕಾರ್ಯದರ್ಶಿಯಾಗಿ ಬಾಲಚಂದ್ರ ಸನಿಲ್ , ಟ್ರಸ್ಟಿಗಳಾದ ಅವಿನಾಶ್ ಕೋಟ್ಯಾನ್, ಶ್ರೀಮತಿ ಪ್ರಜ್ಞಾ, ಯೋಗೀಶ್ ಕೋಟ್ಯಾನ್, ಹೇಮರಾಜ್, ಶಾಲಾ ಪ್ರಾಂಶುಪಾಲ ಯತೀಶ್ ಅಮೀನ್, ಮುಖ್ಯೋಪಾಧ್ಯಾಯನಿ ಶ್ರೀಮತಿ ಗೀತಾ ಶೆಟ್ಟಿ , ಪಿಟಿಎ ಅಧ್ಯಕ್ಷ ಉಮೇಶ್ ಜಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಬಾಲಚಂದ್ರ ಸನಿಲ್ ಸ್ವಾಗತಿಸಿದರು. ಪೃಥ್ವಿರಾಜ್ ಹಾಗೂ ಶ್ರೀಮತಿ ಹರ್ಷಿತಾ ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀಮತಿ ಮಂಜುಳಾ ಕೆ.ವಿ ಧನ್ಯವಾದವಿತ್ತರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.