ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಧ್ವಜಸ್ತಂಭಕ್ಕೆ ತೈಲಾಭ್ಯಂಜನ
Monday, November 24, 2025
ಹಳೆಯಂಗಡಿ:ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ನೂತನ ಧ್ವಜಸ್ತಂಭಕ್ಕೆ ತೈಲಾಭ್ಯಂಜನ ಕಾರ್ಯಕ್ರಮವು ವೇದಮೂರ್ತಿ ರಂಗನಾಥ್ ಭಟ್ ರವರ ಪೌರೋಹಿತ್ಯದಲ್ಲಿ ಭಾನುವಾರದಂದು ಶ್ರೀ ಕ್ಷೇತ್ರದ ಆವರಣದಲ್ಲಿ ನಡೆಯಿತು.
ಈ ಸಂದರ್ಭ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಧ್ಯಕ್ಷ ವಾಮನ ಇಡ್ಯಾ, ತೀಯಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧ್ವಜಸ್ತಂಭ ದಾನಿ ಲೀಲಾ ಅಮೃತ ಕುಮಾರ್ ಪರವಾಗಿ ರಾಜೇಶ್ ಪೂಜಾರಿ ವೇಣೂರು, ಧನರಾಜ್ ಕೋಟ್ಯಾನ್ ಅಗ್ಗಿದಕಳಿಯ,
ಶ್ರೀಕಾಂತ್ ರಾವ್ ದಂಪತಿಗಳು,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಂಜುನಾಥ್ ಕಂಬಾರ, ಕ್ಷೇತ್ರದ ಅರ್ಚಕ ಸುರೇಶ್ ಪೂಜಾರಿ, ಉಮೇಶ್ ಪೂಜಾರಿ, ಕಾಂತುಲಕ್ಕಣ ಯಾನೆ ಪಠೇಲ್ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ಕಡಪುರ ಮನೆತನದ ಹೇಮಚಂದ್ರ ಸುವರ್ಣ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಗೌರವಾಧ್ಯಕ್ಷ ಪದ್ಮನಾಭ ಬಂಗೇರ,
ಕೋಶಾಧಿಕಾರಿ ಶ್ರೀಧರ ಸುವರ್ಣ, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಕೋಟ್ಯಾನ್,
ಕೋಶಾಧಿಕಾರಿ ದಯಾನಂದ ಗುರಿಕಾರರು, ಉಪಾಧ್ಯಕ್ಷ ಅನಿಲ್ ಪೂಜಾರಿ, ಕಾರ್ಯದರ್ಶಿ ನವೀನ್ ಸಾಲ್ಯಾನ್, ಮುಂಬೈ ಸಮಿತಿಯ ಸುರೇಂದ್ರ ಬಂಗೇರ, ಪ್ರೇಮನಾಥ್ ಸುವರ್ಣ, ಸದಸ್ಯರಾದ ದಿನೇಶ್ ಸುವರ್ಣ, ಎಸ್ ಆರ್ ಪ್ರದೀಪ್, ದೇವರಾಜ್ ವಿ. ಸಾಲ್ಯಾನ್, ದೇವರಾಜ್ ಕೋಟ್ಯಾನ್ ಚೇಳಾಯಾರು ದೇವು ಪೂಜಾರಿ, ನಿತಿನ್ ಕುಕ್ಯಾನ್, ಹರೀಶ್ ಕುಮಾರ್, ಯತೀಶ್ ಸಾಲ್ಯಾನ್, ಜಗದೀಶ್ ಅಂಚನ್, ಸಂದೀಪ್, ರಾಘು ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್, ಮಹಿಳಾ ಸಮಿತಿಯ ಶಕುಂತಳಾ ಭೋಜ ಬಂಗೇರ,
ಪುಷ್ಪಾ ದಯಾನಂದ, ಮಾಲತಿ ಡಿ ಕೋಟ್ಯಾನ್, ರೇಷ್ಮಾ ಅಶೋಕ್, ಸುನಂದಾ ಜಗನ್ನಾಥ್, ಸಸಿಹಿತ್ಲು ಗ್ರಾಮಸ್ಥರು, ಕಡಪುರ ಕುಟುಂಬಸ್ಥರು, ಮಿತ್ರಪಟ್ಣ ಮುಕ್ಕದ ಸದಸ್ಯರು ಉಪಸ್ಥಿತರಿದ್ದರು.