ಉಲ್ಲಂಜೆ ಕ್ಷೇತ್ರದಲ್ಲಿ ಕಟೀಲು ಮೇಳದ ಯಕ್ಷಗಾನ,ಕಲಾವಿದರಿಗೆ ಸನ್ಮಾನ
Saturday, November 22, 2025
ಕಟೀಲು: ಉಲ್ಲoಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತಾ ಚಾಮುಂಡೇಶ್ವರಿ ಗುಳಿಗ ಭದ್ರಕಾಳಿ ಸನ್ನಿದಿಯ ವಠಾರ ದಲ್ಲಿ ಶುಕ್ರವಾರದಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶವಾತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ನಡೆಯಿತು.ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಮೇಳದ ಪ್ರಬಂಧಕ ಶಶಿಧರ್ ಶೆಟ್ಟಿ ಪಂಜ , ಪ್ರಧಾನ ಭಾಗವತ ಬಲಿಪ ಶಿವ ಶಂಕರ್ ಭಟ್ ರವರನ್ನು ಸನ್ಮಾನಿಸಲಾಯಿತು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ ದ ಜಯರಾಮ್ ಮುಕ್ಕಾಲ್ದಿ ,ಉಳ್ಳಂಜೆ ಶ್ರೀಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ,ಡಾ.ಸಂಜೀವ ಮಡಿವಾಳ, ನಾಟಕ ಕಲಾವಿದ ರಾಜೇಶ್ ಕೆಂಚನಕೆರೆ, ಶೇಖರ ಪೂಜಾರಿ , ವಸಂತ ಪೂಜಾರಿ, ಗಣೇಶ್, ಸುರೇಶ್ ,ನವೀನ್ ಉಲ್ಲಾoಜೆ ಹಾಗೂ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಸಿದರು.