ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ- ಫೆ.5 ರಿಂದ 9 ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ
Monday, November 3, 2025
ಸಸಿಹಿತ್ಲು :ಮುಲ್ಕಿ ತಾಲೂಕಿನ ಒಂಬತ್ತು ಮಾಗಣೆಯ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಸ್ಥಾಪಿಸಿದ ಸುಮಾರು 800 ವರ್ಷಗಳ ಇತಿಹಾಸವಿರುವ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು 2026ರ ಫೆ.5ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಮ್ಮಾನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸುಮಾರು 3 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳು ಸಿದ್ಧಗೊಂಡಿದ್ದು ಕಾಂತಾಬಾರೆ ಬೂದಾಬಾರೆಯವರಿಗೆ ಪ್ರತ್ಯೇಕ ಗರೋಡಿ ಮಾತ್ರವಲ್ಲದೆ ಶ್ರೀ ಉಳ್ಳಾಯ, ಇಷ್ಟದೇವತಾ, ಕೊಡಮಣಿತ್ತಾಯ, ಧೂಮಾವತಿ, ಬಂಟ, ಜಾರಂದಾಯ, ಬಂಟ, ಓಡ್ಯಂತಾಯ, ಮೂಲ ಮೈಸಂದಾಯ ಸೇರಿದಂತೆ ಪರಿವಾರ ಶಕ್ತಿಗಳಿಗೆ ಸಂಪೂರ್ಣ ಶಿಲಾಮಯ ದೈವಸ್ಥಾನ ನಿರ್ಮಾಣವಾಗುತ್ತಿದೆ. ಗೋಪುರ, ಧ್ವಜಸ್ತಂಭ, ಸಮುದಾಯ ಭವನ ಮತ್ತಿತರ ಯೋಜನೆಗಳಿವೆ ಎಂದು ಅವರು ತಿಳಿಸಿದರು.
ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್ ಮಾತನಾಡಿ,
ಗರೋಡಿಗೆ ಸಂಬಂಧಪಟ್ಟ, ಅನಾದಿ ಕಾಲದಿಂದ ವಾಡಿಕೆಯಲ್ಲಿರುವಂಥ ಧ್ವಜಸ್ತಂಭಕ್ಕೆ ಈಗಾಗಲೇ ಸುಳ್ಯದಿಂದ ಮರ ಬಂದಿದ್ದು ಅದರ ಕೆತ್ತನೆ ಕೆಲಸ ಆರಂಭವಾಗಿದ್ದು ಬೇಗದಲ್ಲೆ ಆ ಮರಕ್ಕೆ ತಾಮ್ರ ಮುಚ್ಚಿ ಕ್ಷೇತ್ರದಲ್ಲಿ ನಿರ್ಮಾಣ ಮಾಡುವ ಉದ್ದೇಶವನ್ನು ಸಮಿತಿ ಇರಿಸಿಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ,ಸಿ.ಬಿ.ಕರ್ಕೇರ,ಕಾರ್ಯಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್ ಕೋಟ್ಯಾನ್,ಆಡಳಿತ ಸಮಿತಿ ಉಪಾಧ್ಯಕ್ಷ ಅನಿಲ್ ಪೂಜಾರಿ,ಕೋಶಾಧಿಕಾರಿಗಳಾದ ಎಸ್. ದಯಾನಂದ,ಶ್ರೀಧರ ಸುವರ್ಣ ಕಾಂತುಲಕ್ಕಣ ಯಾನೆ ಪಟೇಲ್ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ,ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕರಾದ ಸುರೇಶ್ ಪೂಜಾರಿ,ದಾಮೋದರ. ಪೂಜಾರಿ,ಆಡಳಿತ ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ, ಜೀರ್ಣೋದ್ದಾರ ಮಹಿಳಾ ಸಮಿತಿಅಧ್ಯಕ್ಷೆ ಪುಷ್ಪಾ ದಯಾನಂದ್,ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಸ್.ಆರ್.ಪ್ರಭಾತ್,,ಆಡಳಿತ ಸಮಿತಿ ಕಾರ್ಯದರ್ಶಿ ನವೀನ್ ಕುಮಾರ್,ಲೀಲಾಧರ ಬಂಗೇರ ದುಬೈ,ಮುಂಬೈ ಸಮಿತಿ ಕೋಶಾಧಿಕಾರಿ ದಿನೇಶ್ ಪಿ ಸಾಲ್ಯಾನ್, ನಡಿ ಕುದ್ರು ಶ್ರೀ ಜಾರಂದಾಯ ದೈವಸ್ಥಾನದ ನಿರಂಜನ ಪೂಜಾರಿ ಉಪಸ್ಥಿತರಿದ್ದರು.