-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಕಿನ್ನಿಗೋಳಿ ಯುಗಪುರುಷದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡ ಭಾಷೆ, ಸಂಸ್ಕೃತಿ ಉಳಿಸೋಣ : ಕೆ. ಭುವನಾಭಿರಾಮ  ಉಡುಪ

ಕಿನ್ನಿಗೋಳಿ ಯುಗಪುರುಷದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡ ಭಾಷೆ, ಸಂಸ್ಕೃತಿ ಉಳಿಸೋಣ : ಕೆ. ಭುವನಾಭಿರಾಮ ಉಡುಪ


ಕಿನ್ನಿಗೋಳಿ : ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಿ, ಉಳಿಸಬೇಕು ಕನ್ನಡ ಭಾಷೆಗೆ ಸ್ವಾಭಿಮಾನದ ಗೌರವವಿದೆ.  ಮಕ್ಕಳಲ್ಲಿ ಕನ್ನಡ ಅಭಿಮಾನವನ್ನು ಬೆಳೆಸೋಣ ಎಂದು ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಅವರು ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಾಭಗಿತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆಯನ್ನು ವಹಿಸಿದ್ದರು. 
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಎನ್ನುವ ವಿಷಯದಲ್ಲಿ ಪಾಂಪೈ  ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ವಿ. ಮಾತನಾಡಿ, ಕನ್ನಡ ನಶಿಸದ ಭಾಷೆಯಲ್ಲ, ಆತಂಕ ಬೇಡ ಓದುಗರು ಕಡಿಮೆಯಾದರೂ ಸಾಹಿತ್ಯ ಚಟುವಟಿಕೆ ಕಡಿಮೆಯಾಗಿಲ್ಲ. ಬರಹಗಾರರನ್ನು  ಬೆಳೆಸಿ ಓದುಗರನ್ನು ಸೃಷ್ಟಿಸೋಣ ಎಳೆಯ ಮಕ್ಕಳಲ್ಲಿ ಸಾಹಿತ್ಯ ಅಭಿಮಾನವನ್ನು ಜಾಗೃತಗೋಳಿಸೋಣ ಕನ್ನಡಿಗರ ಹೋರಾಟದಿಂದ ಕನ್ನಡ ಭಾಷೆಗೆ ಸ್ಥಾನಮಾನ ಸಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶಿವಾನಂದ ಪ್ರಭು ಅವರನ್ನು ರಾಜ್ಯೋತ್ಸವ ಗೌರವಾರ್ಪಣೆ ನೀಡಲಾಯಿತು. 
ಉದ್ಯಮಿ ಅಗರಿ ರಾಘವೇಂದ್ರರಾವ್ ಸುರತ್ಕಲ್,  ಸಾಣೂರು ಅರುಣ್ ಶೆಟ್ಟಿಗಾರ್, ಸತೀಶ್ ಬಂಗೇರ, ಉಷಾ ಕಿರಣ್, ಸಾಹಿತ್ಯ ಸಂಘಟಕ ಪ್ರದೀಪ್ ಕುಮಾರ್, ಮೂಲ್ಕಿ ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೊಸ್ಸಿ ಪಿಂಟೋ, ಹಿರಿಯ ಸಾಹಿತಿ ಬಾಲಕೃಷ್ಣ ಉಡುಪ, ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್ ಉಪಸ್ಥಿತರಿದ್ದರು.
ಸಂಭ್ರಮ ವಂದಿಸಿದರು. ಅಭಿಷೇಕ್ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ