-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಎಕ್ಕಾರು ಬಂಟರ ಸಂಘದ  ವಾರ್ಷಿಕ ಮಹಾಸಭೆ,  ಗೌರವಾರ್ಪಣೆ, ಪ್ರತಿಭಾಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಎಕ್ಕಾರು ಬಂಟರ ಸಂಘದ ವಾರ್ಷಿಕ ಮಹಾಸಭೆ, ಗೌರವಾರ್ಪಣೆ, ಪ್ರತಿಭಾಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಬಜಪೆ:ಬಂಟರ ಸಂಘ (ರಿ )ಎಕ್ಕಾರು ಇದರ ವಾರ್ಷಿಕ ಮಹಾಸಭೆ, ಸಮಾಜ ಬಾಂಧವರ ಸಭೆ, ಗೌರವಾರ್ಪಣೆ, ಪ್ರತಿಭಾಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಎಕ್ಕಾರು ಬಂಟರ  ಭವನದಲ್ಲಿ ಆದಿತ್ಯವಾರದಂದು ನಡೆಯಿತು. ಬಂಟರ  ಯಾನೆ ನಾಡವರ ಮಾತೃ ಸಂಘದ  ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು  ಸಮಾರಂಭವನ್ನು ಉದ್ಘಾಟಿಸಿದರು. ಎಕ್ಕಾರು ಬಂಟರ  ಸಂಘದ ಅಧ್ಯಕ್ಷ  ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಪ್ರಾಸ್ತಾವಿಕ ಮಾತುಗಳೊಂದಿಗೆ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ಈ ವೇಳೆ ಹಿರಿಯ ಕೃಷಿಕರಾದ ಶಂಭು ಶೆಟ್ಟಿ ಕೊಂಬೋಡಿ, ಜಯ ಶೆಟ್ಟಿ ಬಾಕ್ಯರಕೋಡಿ , ನಿವೃತ ದೈಹಿಕ ಶಿಕ್ಷಕ ದಯಾನಂದ ಮಾಡ ಎಕ್ಕಾರು, ವೈದ್ಯಕೀಯ ಪದವಿ ಪಡೆದ ಡಾ. ಸಾಕ್ಸಿ ಶೆಟ್ಟಿ ಎಂ ಬಿ ಬಿ ಎಸ್ ಇವರನ್ನು ಗೌರವಿಸಲಾಯಿತು.17 ವಿದ್ಯಾರ್ಥಿಗಳಿಗೆ  ಪ್ರತಿಭಾಪುರಸ್ಕಾರ, 53ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 5 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ  ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ  ಭಾಗವಹಿಸಿದ ಎಲ್ಲರನ್ನು ಗುರುತಿಸಲಾಯಿತು.ಹಾಗೂ ಆಟೋಟ ಸ್ಪರ್ಧೆಗಳಲ್ಲಿ  ವಿಜೇತರಾದರನ್ನೂ  ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಸಮಾಜದ ಮಹದಾನಿ  ಸದಾಶಿವ ಶೆಟ್ಟಿ ಕನ್ಯಾನ, ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ, ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ ಮಂಗಳೂರು ಬಂಟರ ಸಂಘಗಳ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಎಕ್ಕಾರು ಕೊಡಮಣಿತ್ತಾಯ  ದೈವಸ್ಥಾನದ ಆಡಳಿತ ಮೊಕ್ತೆಸರ  ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ) ,ಶುಭಲಕ್ಷ್ಮೀ ಶೆಟ್ಟಿ  ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
 ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ದಯಾನಂದ ಮಾಡ ಅವರು  ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ