-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಕಟೀಲಿನ ನುಡಿಹಬ್ಬದಲ್ಲಿ ಉಪನ್ಯಾಸ, ಸಂವಾದರಕ್ಷಿತಾ ಪ್ರೇಮ್, ಡಾಲಿ ಧನಂಜಯ್ ಉಪಸ್ಥಿತಿ

ಕಟೀಲಿನ ನುಡಿಹಬ್ಬದಲ್ಲಿ ಉಪನ್ಯಾಸ, ಸಂವಾದರಕ್ಷಿತಾ ಪ್ರೇಮ್, ಡಾಲಿ ಧನಂಜಯ್ ಉಪಸ್ಥಿತಿ



ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 6 ರಿಂದ 8 ರವರೆಗೆ ನಡೆಯುವ ಐದನೆಯ ವರ್ಷದ ನುಡಿಹಬ್ಬ ಭ್ರಮರ ಇಂಚರ ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ತಾ. 6 ರಂದು ಬೆಳಿಗ್ಗೆ ಕಟೀಲು ಪದವೀ ಕಾಲೇಜಿನಿಂದ ಮೆರವಣಿಗೆಗೆ ಚಾಲನೆಯನ್ನು ಡಾ. ಜಿ. ರಾಮಕೃಷ್ಣ ಆಚಾರ್ ನೆರವೇರಿಸಲಿದ್ದಾರೆ. ಧ್ವಜಾರೋಹಣವನ್ನು ಕೇಶವ ಪಾಟಾಳಿ, ವಸ್ತು ಪ್ರದರ್ಶನದ ಉದ್ಘಾಟನೆಯನ್ನು ರಾಜೇಶ್ ಚೌಟ ಮಾಡಲಿದ್ದು, ಸಮ್ಮೇಳನವನ್ನು ಟಿವಿ ವಾಹಿನಿ ನಿರೂಪಕ ರಂಗನಾಥ್ ಭಾರದ್ವಾಜ್ ನೆರವೇರಿಸಲಿದ್ದಾರೆ. ಕಾಲೇಜುಗಳ ಸಂಚಿಕೆ ಇಂಚರ, ಭ್ರಮರವಾಣಿಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಬಿಡುಗಡೆಗೊಳಿಸುತ್ತಾರೆ. ಐದು ನುಡಿಹಬ್ಬಗಳ ಅಧ್ಯಕ್ಷರಾದ ಶ್ರೀಧರ ಡಿ.ಎಸ್, ನಾಡೋಜ ಕೆ.ಪಿ.ರಾವ್, ಪಾದೇಕಲ್ಲು ವಿಷ್ಣು ಭಟ್, ಲಕ್ಷ್ಮೀಶ ತೋಳ್ಪಾಡಿ ಹಾಗೂ ವಸಂತ ಭಾರದ್ವಾಜರ ಉಪಸ್ಥಿತಿಯಲ್ಲಿ ಗೋಷ್ಟಿ ನಡೆಯಲಿದೆ.
ರಂಗಭೂಮಿ, ಸಿನಿಮಾ ಗೊಷ್ಟಿಯಲ್ಲಿ ಖ್ಯಾತ ನಟರಾದ ಪ್ರೇಮ್, ರಕ್ಷಿತಾ, ಡಾಲಿ ಧನಂಜಯ್, ನಿರ್ದೇಶಕ ಮಹೇಶ್ ಬಾಬು ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಭಾಗವಹಿಸಲಿದ್ದಾರೆ.
ಬಳಿಕ ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವ ನಡೆಯಲಿದೆ.
ತಾ. 7 ರ ಶುಕ್ರವಾರ ಸಮ್ಮೇಳನಾಧ್ಯಕ್ಷ ವಸಂತ ಭಾರದ್ವಾಜರ ಕಾವ್ಯ ಗಾಯನ, ಅವರೊಂದಿಗೆ ಸಂವಾದ, ಖ್ಯಾತ ಉರಗತಜ್ಞ ಗುರುರಾಜ ಸನಿಲ್ ಅವರಿಂದ ಪ್ರಕೃತಿ ಸಂಸ್ಕೃತಿ ವಿಚಾರಗೋಷ್ಟಿ, ಪ್ರೊ. ಅರವಿಂದ ಹೆಬ್ಬಾರ್ ಅವರಿಂದ ಸಂಗೀತ ಸ್ವಾದ ಉಪನ್ಯಾಸ, ಡಾ. ಶಿಲ್ಪಾ ಎಚ್. ನವೀನ್ ಅವರಿಂದ ಮೊಬೈಲು ಮತ್ತು ಆರೋಗ್ಯದ ಕುರಿತು ಮಾತು ನಡೆಯಲಿದೆ.
ಜನಸಾಮಾನ್ಯ ಸಾಧಕರಾದ ಸದಭಿರುಚಿ ಹಾಸ್ಯದ ವಿಡಿಯೋಗಳ ಮೂಲಕ ಜನಪ್ರಿಯರಾದ ಯಾಸಿರ್ ಯಾಚಿ, ಗೋ ಆಧಾರಿತ ಕೃಷಿ ಮತ್ತು ಗವ್ಯ ಉತ್ಪನ್ನಗಳ ತಯಾರಿಕೆಯ ನಾಗರಾಜ ಪೈ, ವಿಕಲಾಂಗತೆಗೆ ಎದೆಗುಂದದೆ ಚಿತ್ರಕಲೆಯಲ್ಲಿ ಸಾಧನೆಗೈಯುತ್ತಿರುವ ಗಣೇಶ ಪಂಜಿಮಾರು, ಸುಮ ಪಂಜಿಮಾರು, ಲಕ್ಷಾಂತರ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಮಾಧವ ಉಳ್ಳಾಲ್ ಹಾಗೂ ಖ್ಯಾತ ನಟ ಪ್ರಕಾಶ್ ತುಮಿನಾಡ್ ಸ್ಪೂರ್ತಿಯ ಮಾತುಗಳನ್ನಾಡಲಿದ್ದಾರೆ.
ತಾ.8 ರ ಶನಿವಾರ ಡಾ. ಲಕ್ಷ್ಮೀ ಜಿ. ಪ್ರಸಾದ್ ಜಾನಪದ ಜವಾಬ್ದಾರಿಯ ಬಗ್ಗೆ, ನಾರಾಯಣ ನಾಯಕ ಹಾಗೂ ಡಾ. ಸಬಿತಾ ಕೊರಗ ಶಿಕ್ಷನ ಸಾಧನೆಗಳ ಬಗ್ಗೆ ಮಾತನಾಡಲಿದ್ದಾರೆ. ಕಟೀಲು ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಮ್ಮಿಲನದ ಗೋಷ್ಟಿಯಲ್ಲಿ ಐದು ಮಂದಿ ಶಿಕ್ಷಕರನ್ನು ಸಂಮಾನಿಸಲಾಗುವುದು.
ಸಮಾರೋಪ ಸಮಾರಂಭದಲ್ಲಿ ವರದರಾಜ ಚಂದ್ರಗಿರಿ ಸಮಾರೋಪ ಮಾತುಗಳನ್ನಾಡಲಿದ್ದು, ದಾಯ್ಜಿವರ್ಲ್ಡ್‌ನ ವಾಲ್ಟರ್ ನಂದಳಿಕೆ, ಕಸಾಪದ ಡಾ. ಎಂ.ಪಿ.ಶ್ರೀನಾಥ್, ಡಾ. ಎಂ. ನವೀನ್ ಕುಮಾರ್, ಮಾಜಿ ಸಾಂಸದ ನಳಿನ್ ಕುಮಾರ್, ಮಾಜಿ ಸಚಿವ ಅಭಯಚಂದ್ರ, ಡಾ. ಗಣೇಶ್ ಸಂಕಮಾರ್ ಉಪಸ್ಥಿತಿಯಲ್ಲಿ ಕಟೀಲು ಶಾಲೆಯ ಹಳೆ ವಿದ್ಯಾರ್ಥಿ ಬೆಂಗಳೂರು ಡಿ.ಜೆ.ಸಿ.ಎಸ್‌ನ ಜಂಟಿ ನಿರ್ದೇಶಕ ಜಗದೀಶ ಬಳ್ಳಾಲಬೈಲು ಅವರನ್ನು ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಮಾನಿಸಲಾಗುವುದು. ಬಳಿಕ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗಳ ವಾರ್ಷಿಕೋತ್ಸವ ನಡೆಯಲಿದೆ.

ನುಡಿಹಬ್ಬಕ್ಕೆ ರಾಜ್ಯಪಾಲ ಎಸ್. ಅಬ್ದುಲ್ ನಜೀರ್
ತಾ. 8 ರಂದು ಬೆಳಿಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ರಾಜ್ಯಪಾಲರು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಭಾಗವಹಿಸಲಿದ್ದು ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಸಾಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ