ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗ್ರಾಮದ ಸಂಜೀವಿನಿ : ಅಭಯಚಂದ್ರ ಜೈನ್
Monday, November 3, 2025
ಮೂಲ್ಕಿ :ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಗ್ರಾಮದ ಸಂಜೀವಿನಿ ಇದ್ದಂತೆ, ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವುದರಿಂದ ಗ್ರಾಮ ಗ್ರಾಮದಲ್ಲಿ ಜಾಗೃತಿ ಮೂಡಿದೆ, ಅವರ ಪ್ರತಿಭೆಯು ಅನಾವರಣಗೊಳ್ಳಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮುದಾಯ ಭವನದಲ್ಲಿ ನಡೆದ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಮೂಲ್ಕಿ ಹಾಗೂ ಮಂಗಳೂರು ತಾಲ್ಲೂಕು ವ್ಯಾಪ್ತಿಯ ಮಿಥುನ್ ಎಂ ರೈ ಅಭಿಮಾನಿ ಬಳಗದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೂಡಬಿದ್ರೆ ಕ್ಷೇತ್ರಕ್ಕೆ ಒಳಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ವಿವಿಧ ಸಾಂಸ್ಕೃತಿಕ ಮತ್ತು ಆರೋಗ್ಯ ಮಾಹಿತಿವನ್ನು ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಮಾತನಾಡಿ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಸರ್ಕಾರದ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಿ ಕುಟುಂಬ ಬೆಳಗಿಸುವ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದರು. ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್, ಹಿರಿಯ ಕಾಂಗ್ರೆಸ್ ನಾಯಕ ಶಿವರಾಮ ಮಲ್ಲಿ, ಹಸನಬ್ಬ ಬಾಳ, ಪ್ರಮೋದ್ ಕುಮಾರ್ ಕಿನ್ನಿಗೋಳಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಡಿಕೋಸ್ಟಾ, ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾರ್ಯದರ್ಶಿ ಮಂಜುನಾಥ ಕಂಬಾರ, ಚಂದ್ರಹಾಸ ಸನಿಲ್ ಮೂಡಬಿದ್ರೆ, ಮತ್ತಿತರರು ಇದ್ದರು.
ಆಳ್ವಾಸ್ ಕಾಲೇಜು ವೈದ್ಯೆ ಡಾ.ಪ್ರಗತಿ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು
ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೈ ಕೃಷ್ಣ ಕೋಟ್ಯಾನ್ ಹಳೆಯಂಗಡಿ, ಸುಧಾಕರ ಸಾಲ್ಯಾನ್ ಐಕಳ,ಎಕ್ಕಾರು ಡಾ.ಪದ್ಮನಾಭ ಭಟ್ ಕಟೀಲು, ಶ್ರೀದೇವಿ ಮಹಿಳಾ ಮಂಡಳಿ ತೋಕೂರು, ಬಜಪೆ ಬಿಲ್ಲವ ಸಮಾಜ ಸೇವಾ ಸಂಘ , ಜೋಕಟ್ಟೆ ಆಜಾದ್ ಯೂತ್ ಕ್ಲಬ್ ರವರನ್ನು ಗೌರವಿಸಲಾಯಿತು ಬಳಿಕ
ಸಾಂಸ್ಕೃತಿಕ ಜಾನಪದ ನೃತ್ಯ,ಭಾವಗೀತೆ ಸ್ಪರ್ಧೆ ನಡೆಯಿತು.