ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ 78ನೇ ವರ್ಷದ ಜನ್ಮ ದಿನ, ಹಣ್ಣು ಹಂಪಲು ಹಾಗೂ ಸಹಾಯಧನ ವಿತರಣೆ
Tuesday, November 25, 2025
ಕಿನ್ನಿಗೋಳಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬಜಪೆ, ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ 78ನೇ ವರ್ಷದ ಜನ್ಮ ದಿನದ ಪ್ರಯುಕ್ತ ಮೆನ್ನಬೆಟ್ಟು ಗ್ರಾಮದ ಬಡ ಕುಟುಂಬದ ಮಣಿ ಅವರಿಗೆ ಹಣ್ಣು ಹಂಪಲು ಹಾಗೂ ಸಹಾಯಧನ ವಿತರಿಸಲಾಯಿತು. ಕಾರ್ಯಕ್ರಮವು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಭುವನಾಭಿರಾಮ ಉಡುಪರವರ ಉಪಸ್ಥಿತಿಯಲ್ಲಿ ನಡೆಯಿತು. ಕಿನ್ನಿಗೋಳಿ ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಂತಿ , ಸ್ಥಳೀಯರಾದ ರಘುರಾಮ್, ಕಿನ್ನಿಗೋಳಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಪಂಚಾಯತ್ ಸದಸ್ಯರುಗಳು , ಸೇವಾಪ್ರತಿನಿಧಿಗಳು ಈ ಸಂದರ್ಭ ಹಾಜರಿದ್ದರು.