-->
ಕಟೀಲಿನಲ್ಲಿ ಕಾರ್ತಿಕಮಾಸದ ನಾಮಸಂಕೀರ್ತನೋಪಾಸನೆ ಸಮಾಪ್ತಿ

ಕಟೀಲಿನಲ್ಲಿ ಕಾರ್ತಿಕಮಾಸದ ನಾಮಸಂಕೀರ್ತನೋಪಾಸನೆ ಸಮಾಪ್ತಿ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭಜನೆ ನಾಮಸಂಕೀರ್ತನೋಪಾಸನೆ ಶುಕ್ರವಾರ ಸಮಾಪ್ತಿಗೊಂಡಿತು.
ಈ ಸಂದರ್ಭ ಮಾತನಾಡಿದ ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬ್ರಹ್ಮಕಲಶೋತ್ಸವದ ಬಂದ ಸಾವಿರಕ್ಕೂ ಮಿಕ್ಕಿದ ಭಜನಾ ತಂಡಗಳ ಪ್ರೇರಣೆಯಿಂದ ಆ ಬಳಿಕದ ವರುಷಗಳಲ್ಲಿ ಭಜನಾ ತಂಡಗಳಿಗೆ ಅವಕಾಶ ನೀಡುವುದಕ್ಕಾಗಿ ಕಾರ್ತಿಕ ಮಾಸದ ಭಜನೆಯನ್ನು ಆರಂಭಿಸಿದ್ದು, ಇನ್ನೂ ಹೆಚ್ಚಿನ ಭಜನಾ ತಂಡಗಳು ಅವಕಾಶ ಕೇಳುತ್ತಿರುವುದರಿಂದ ಮುಂದಿನ ವರುಷಗಳಲ್ಲಿ ಸಾಧ್ಯವಾದರೆ ಎರಡು ತಿಂಗಳ ಕಾಲ ವಿಸ್ತರಿಸುವ ಯೋಚನೆ ಇದೆ.
ಭಜನೆಗಳನ್ನು, ಮಂತ್ರಗಳನ್ನು ತಪ್ಪುತಪ್ಪಾಗಿ ಹೇಳಬಾರದು. ಶ್ರದ್ಧಾ ಭಕ್ತಿಯಿಂದ ಹೇಳುವ ಭಜನೆಗೆ ದೇವರು ಸುಲಭವಾಗಿ ಒಲಿಯುತ್ತಾರೆ ಎಂದು ಹೇಳಿದರು.
ಭಜನಾ ಸಂಘಟಕಿ ಜ್ಯೋತಿ ಉಡುಪ ಮಾತನಾಡಿ ಈ ವರುಷ ೨೩೪ ತಂಡಗಳ ೨೨೩೦ ಮಂದಿ ಕಾರ್ತಿಕ ಮಾಸದ ಭಜನೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯರು ಅಲ್ಲದೆ ಮುಂಬೈ, ಕಾಸರಗೋಡು, ಮೈಸೂರು, ಬೆಂಗಳೂರು ಮುಂತಾದ ಊರುಗಳಿಂದಲೂ ಭಜನಾ ತಂಡಗಳು ಭಾಗವಹಿಸಿದ್ದು, ಐನೂರಕ್ಕೂ ಹೆಚ್ಚು ಮಕ್ಕಳೂ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಭಜನೆ ಸಂಘಟನೆಯಲ್ಲಿ ಸಹಕರಿಸಿದ ಶ್ರೀದೇವಿ ಭಜನಾ ಮಂಡಳಿಯ ಸದಸ್ಯರನ್ನು ಶೇಷವಸ್ತ್ರ ನೀಡಿ ಗೌರವಿಸಲಾಯಿತು.
ಸಂಜೀವನಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಸುರೇಶ್ ರಾವ್, ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪಾಂಡುರಂಗ ಭಟ್ ಉಪಸ್ಥಿತರಿದ್ದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ