ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಉತ್ಸವದ ಅಂಗವಾಗಿ ಉಗ್ರಾಣ ಮುಹೂರ್ತ
Thursday, November 20, 2025
ತೋಕೂರು : ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಉತ್ಸವದ ಅಂಗವಾಗಿ ಉಗ್ರಾಣ ಮುಹೂರ್ತವು ನ. 19 ರಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಟಿ. ಕೆ. ಮಧುಸೂಧನ್ ಆಚಾರ್ ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಸಮಿತಿ ಸದಸ್ಯರಾದ ಪುರುಷೋತ್ತಮ ಸಿ. ಕೋಟ್ಯಾನ್, ಸಂಪತ್ ಜೆ ಶೆಟ್ಟಿ ತೋಕೂರುಗುತ್ತು, ಅಶೋಕ್ ಕುಂದರ್, ಸವಿತಾ ಶರತ್ ಬೆಳ್ಳಾಯರು, ಶೋಭಾ ವಿ. ಅಂಚನ್, ನಿಕಟಪೂರ್ವ ಅಧ್ಯಕ್ಷ ಹರಿದಾಸ್ ಭಟ್, ಗ್ರಾಮಸ್ಥರಾದ ಪದ್ಮನಾಭ ಆಚಾರ್ಯ, ಲೋಕಯ್ಯ ಸಾಲ್ಯಾನ್, ಸುಬ್ರಹ್ಮಣ್ಯ ಕೆ. ರಾವ್, ಪುರುಷೋತ್ತಮ ಆಚಾರ್ಯ, ಗೋಪಾಲ್ ಮೂಲ್ಯ, ರಾಮಣ್ಣ ದೇವಾಡಿಗ, ರಮೇಶ್ ಅಮೀನ್, ಹೇಮನಾಥ್ ಅಮೀನ್, ಸುಗಂದಿ ಡಿ. ಕೊಂಡಾಣ, ಯಶೋಧ ಪಿ. ರಾವ್, ವಿನೋದ ಭಟ್, ಪುಷ್ಪ ಭಂಡಾರಿ, ವನಿತಾ ಕೆ. ಸನಿಲ್, ಶಾರದಾ ಬಂಗೇರ, ದೇವಸ್ಥಾನದ ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.