ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಗೋಪೂಜೆ
Thursday, October 23, 2025
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಆದೇಶದಂತೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋಪೂಜೆಯು ಸಂಭ್ರಮದಿಂದ ನಡೆಯಿತು. ಗೋವುಗಳಿಗೆ ಅರಶಿನ ಕುಂಕುಮ ಹೂಗಳಿಂದ ಅಲಂಕರಿಸಿ ಹಿಂಡಿ, ಬೆಲ್ಲ, ಹಣ್ಣು ಹಂಪಲುಗಳಿಂದ ಗೋಗ್ರಾಸವನ್ನು ನೀಡಿ ಗೋಪೂಜೆಯನ್ನು ದೇವಳದ ಪ್ರಧಾನ ಅರ್ಚಕ ಟಿ ಕೆ ಮಧುಸೂಧನ್ ಆಚಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸವಿತಾ ಬೆಳ್ಳಾಯರು, ಶೋಭಾ ವಿ ಅಂಚನ್ ,ಗ್ರಾಮಸ್ಥರು ಹಾಗೂ ಭಕ್ತರು,ಉಪಸ್ಥಿತರಿದ್ದರು.