-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಶ್ರೀ ಚಂದ್ರಶೇಖರ ಸ್ವಾಮೀಜಿಯವರಲ್ಲಿ ಜೀವನದ ಮೌಲ್ಯ ಅರ್ಥೈಸುವ ವ್ಯಕ್ತಿತ್ವ : ನ್ಯಾಯಮೂರ್ತಿ ವೇಮನಕೊಂಡ ನರಸಿಂಗ್

ಶ್ರೀ ಚಂದ್ರಶೇಖರ ಸ್ವಾಮೀಜಿಯವರಲ್ಲಿ ಜೀವನದ ಮೌಲ್ಯ ಅರ್ಥೈಸುವ ವ್ಯಕ್ತಿತ್ವ : ನ್ಯಾಯಮೂರ್ತಿ ವೇಮನಕೊಂಡ ನರಸಿಂಗ್

ಬೆಂಗಳೂರು : ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಲಿ ಅಥವ ಶೋಷಿತ ಸಮಾಜದವರಾಗಲಿ ಆತನ ಬದುಕಿನ ಬವಣೆಯಲ್ಲಿ ಜೀವನದ ಮೌಲ್ಯವನ್ನು ಅರ್ಥೈಸುವಲ್ಲಿ ಬಹಳಷ್ಟು ಹತ್ತಿರವಾಗುವ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸ್ನೇಹಮಯ ವ್ಯಕ್ತಿತ್ವದಿಂದ ಅವರಲ್ಲಿ ದೈವ ಶಕ್ತಿಯ ಸ್ವರೂಪವನ್ನು ಕಾಣುತ್ತೇವೆ. ನಮ್ಮನ್ನು ಅವರಿಗೆ ಅರ್ಪಿಸಿಕೊಳ್ಳುವ ಚಿಂತನೆ-ಮನೋಭಾವನೆ ನಮ್ಮ ಮನದಲ್ಲಿ ಅರಳುತ್ತದೆ. ನೇರವಾಗಿ ಭಗವಂತನನ್ನು ಕಾಣುವುದಕ್ಕೆ ಸಾಧ್ಯವಿಲ್ಲ ಆದರೆ ಸ್ವಾಮೀಜಿಯವರ ಸತ್‌ಚಿಂತನೆಯಿಂದ ಗುರುವಿನ ಸ್ಥಾನಮಾನದ ಮೂಲಕ ಭಗವಂತನ ಸಾನ್ನಿಧ್ಯದ ಅನುಭವವಾಗುತ್ತದೆ ಎಂದು ಒರಿಸ್ಸಾ ರಾಜ್ಯದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವೇಮಲಕೊಂಡ ನರಸಿಂಗ್ ಹೇಳಿದರು. 
ಅವರು  ತಿರುಪತಿಯ ಗಾಯತ್ರಿ ಸಭಾಂಗಣ ದಲ್ಲಿ ನಡೆದ ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ,ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನುಮದಿನದ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಹಾಗೂ ಅವರ ಧರ್ಮಪತ್ನಿ ರಜನಿ ಚಂದ್ರಶೇಖರ್ ಅವರನ್ನು ವಿಶೇಷವಾಗಿ ಗೌರವಿಸಿ, ಅಭಿನಂದಿಸಿ ಮಾತನಾಡಿದರು. 
ಅಭಿಮಾನಿಗಳ ಅಭಿನಂದನೆಯನ್ನು ಸ್ವೀಕರಿಸಿದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ವಿಶೇಷವಾಗಿ ಅನುಗ್ರಹ ಭಾಷಣ ನುಡಿದರು. 


ಸಾಮಾಜಿಕ ಕಾರ್ಯಕ್ರಮಕ್ಕೆ ಚಾಲನೆ : 

ಬೆಂಗಳೂರಿನ ಸೇವಾಶ್ರಮದಲ್ಲಿ ಪೂಜ್ಯ ಸ್ವಾಮೀಜಿಯವರ ಹುಟ್ಟು ಹಬ್ಬದ ಶುಭದಿನದಲ್ಲಿ ಅವರು ಅಭಿಮಾನಿಗಳು, ಭಕ್ತರು ಹಮ್ಮಿಕೊಂಡಿದ್ದ ಸೇವಾ ಕಾರ್ಯಕ್ರಮವನ್ನು ತಿರುಪತಿ ಜಿಲ್ಲಾ ನ್ಯಾಯಾಧೀಶ ಕೋಟೇಶ್ವರ್ ರಾವ್ ಉದ್ಘಾಟಿಸಿದರು.
ಶ್ರಮಿಕ ವರ್ಗದವರಿಗೆ ಹಾಗೂ ಮಹಿಳೆಯರಿಗೆ ಸಾಮಾಜಿಕ ನೆರವು, ಪ್ರತಿಭಾತ್ವಿತ ಬಡವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಮರ್ಪಣೆಯನ್ನು ನಡೆಸಲಾಯಿತು. ವಿವಿಧ ಆಶ್ರಮ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ಹಣ್ಣು ಹಂಪಲು ಉಪಹಾರವದ ವಿತರಣೆಗೆ ನೈವೇದ್ಯ ರೆಸ್ಟೋರೆಂಟ್ ನ ಸಮೂಹ ಸಂಸ್ಥೆಯ ನಿರ್ದೇಶಕ ಶ್ರೀ ವಂಶಿ ಕೃಷ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಳವಿಕ ವೇಮಲಕೊಂಡ ನರಸಿಂಗ್, ಉದ್ಯಮಿ ಸಜನ್ ಗುಪ್ತ, ಬೆಂಗಳೂರಿನ ನೈವೇಧ್ಯ ರೆಸ್ಟೋರೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ರಾಮೇಶ್ವರ ದೇವರಕೊಂಡ, ಸಮಾಜ ಸೇವಕರಾದ ರಮೇಶಬಾಬು, ರಾಘವ ಸೂರ್ಯ, ರಾಹುಲ್ ಚಂದ್ರಶೇಖರ್, ನ್ಯಾಯವಾದಿ ರೋಶನಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. 


ವಿಮಾನದಲ್ಲಿ ಅಚ್ಚರಿ : 

ಸ್ವಾಮೀಜಿಯವರು ತಮ್ಮ ಕುಟುಂಬ ಸಹಿತರಾಗಿ ವಿಶೇಷ ವಿಮಾನದಲ್ಲಿ ತಿರುಪತಿ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಿದ್ದ ಅವರ ಪರಮಾಪ್ತ ಭಕ್ತರಾದ ಬೆಂಗಳೂರಿನ ಕೆಪಿಕೆಸಿ ಪ್ರಾಪರ್ಟಿಸ್ ನ ಅಧ್ಯಕ್ಷ ತಿರುಪತಿ ಕ್ಷೇತ್ರದ ಮಹಾದಾನಿ ಡಾ. ಕೆ.ಜೆ.ಪುರುಷೋತ್ತಮ್ ಅವರು ವಿಮಾನದಲ್ಲಿಯೇ ವಿಶಿಷ್ಟ ವಿನ್ಯಾಸದ ಕೇಕನ್ನು ಸ್ವಾಮೀಜಿಯವರಿಗೆ ನೀಡಿ ಸಂಭ್ರಮಿಸಿದರಲ್ಲದೇ ವಿಶೇಷ ಉಡುಗೊರೆಯನ್ನು ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸನ್ನಿವೇಶ ಸ್ವಾಮೀಜಿಯವರ ಕುಟುಂಬದವರಿಗೆ ಅಚ್ಚರಿಯ ಕ್ಷಣವಾಗಿತ್ತು.


ಸ್ವಾಮೀಜಿಯವರ ನಿರಂತರ ಕಾರ್ಯಕ್ರಮ :

ಶ್ರೀ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದಿನಪೂರ್ತಿ ದಣಿವರಿಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಆರಾಧ್ಯ ಕ್ಷೇತ್ರವಾಗಿರುವ ತಿರುಪತಿ ತಿರುಮಲ ದೇವಳಕ್ಕೆ ಮುಂಜಾನೆ ಭೇಟಿ ನೀಡಿ ದರ್ಶನ ಪಡೆದು, ಬೆಂಗಳೂರಿನಲ್ಲಿ ಅವರ ಅಭಿಮಾನಿಗಳು ಹಮ್ಮಿಕೊಂಡ ವಿವಿಧ ಸಮಾಜ ಸೇವಾ ಕಾರ್ಯದಲ್ಲಿ ಭಾಗವಹಿಸಿ, ಸೇವಾಶ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿದರು. ನಂತರ ನೇರವಾಗಿ ಅರಬ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಹಿಂದೂ ಶ್ರದ್ಧಾ ಭಕ್ತಿ ಕೇಂದ್ರದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾಗವಹಿಸಲು ಹಾಗೂ ಅನಿವಾಸಿ ಭಾರತೀಯರ ಸಂಘಟನೆಯಿಂದ ಅಭಿನಂದನೆಯನ್ನು ಸ್ವೀಕರಿಸಲು ತೆರಳಿದರು. ಅವರ ಹುಟ್ಟೂರು ಮೂಲ್ಕಿಯಲ್ಲಿಯೂ ಅವರ ಸೇವಾಶ್ರಮದ ಭಕ್ತರು, ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.   




ಸಮಾಜಮುಖಿ ಚಿಂತನೆಯಿಂದ ಕಾರ್ಯ ಸಿದ್ಧಿ : ಶ್ರೀ ಚಂದ್ರಶೇಖರ ಸ್ವಾಮೀಜಿ
ನಮ್ಮ ಮನದಲ್ಲಿನ ನಿರ್ದಿಷ್ಟ ಗುರಿಯನ್ನು ತಲುಪಲು ನಮ್ಮಲ್ಲಿನ ಆಧ್ಯಾತ್ಮಿಕ ಚಿಂತನೆಯನ್ನು ಜಾಗೃತಿಗೊಳಿಸಿದಲ್ಲಿ ಸಮಾಜಮುಖಿ ಚಿಂತನೆಯ ಕಾರ್ಯವು ಸಿದ್ಧಿಸುತ್ತದೆ. ಸೇವಾ ನಿಷ್ಠೆಯಿಂದ ನಮ್ಮನ್ನು ನಂಬುವ ಭಕ್ತ ಸಮೂಹದ ಶ್ರೇಯಸ್ಸನ್ನು ಸದಾ ಬಯಸುವ ಸೌಭಾಗ್ಯ ನನ್ನದಾಗಿದೆ. ಒಂದು ಸಣ್ಣ ಹಳ್ಳಿಯಿಂದ ಬಂದಂತಹ ನಾನು ಇಂದು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಳ್ಳಬೇಕಾದರೆ ನಾನೊಬ್ಬ ಅಪ್ಪಟ ಭಾರತೀಯನಾಗಿರುವುದರಿಂದ ಇಲ್ಲಿನ ಸಂಸ್ಕೃತಿಯ ನೆಲೆಗಟ್ಟಿನಿಂದ ಮಾತ್ರ ಸಾಧ್ಯವಾಗಿದೆ. ಮುಂದಿನ ಜನ್ಮದಲ್ಲಿಯೂ ನಾನು ಭಾರತೀಯನಾಗಿಯೇ ಹುಟ್ಟುವ ಸಂಕಲ್ಪವನ್ನು ಹೊಂದಿದ್ದೇನೆ, ಯಾವುದೇ ದೇಶ ಸುತ್ತಿದರೂ ನಮ್ಮ ಸಂಸ್ಕೃತಿ-ಪರಂಪರೆಯನ್ನು ಪಸರಿಸುವುದೇ ನನ್ನ ಕರ್ತವ್ಯ ಎಂದು ತಿಳಿದುಕೊಂಡಿದ್ದೇನೆ, ಅಭಿಮಾನಿಗಳಿಂದ ನಡೆದ ಸಾಮಾಜಿಕ ಕಾರ್ಯಕ್ಕೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಪೂಜ್ಯ ಸ್ವಾಮೀಜಿ ತಮ್ಮ ಅನುಗ್ರಹ ಭಾಷಣದಲ್ಲಿ ನುಡಿದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ