ಯುಗಪುರುಷ 79ನೇ ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ
Saturday, October 11, 2025
ಕಿನ್ನಿಗೋಳಿ : ಯುಗಪುರುಷ ಪತ್ರಿಕೆಯ 79ನೇ ದಸರಾ-ದೀಪಾವಳಿ ವಿಶೇಷಾಂಕವನ್ನು ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಕಟೀಲು ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣರವರು ಶುಕ್ರವಾರದಂದು ಬಿಡುಗಡೆಗೊಳಿಸಿದರು. ಈ ಸಂದರ್ಭ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಡಾ. ಪ್ರಕಾಶ್ ನಂಬಿಯಾರ್, ಪೃಥ್ವಿರಾಜ್ ಆಚಾರ್ಯ, ಸಚ್ಚಿದಾನಂದ ಭಟ್, ವೆಂಕಟೇಶ್ ಭಟ್ ಪಾವಂಜೆ, ಶ್ರೀರಾಮ್ ಫೈನಾನ್ಸ್‌ನ ಸಚಿನ್, ಶರತ್ ಶೆಟ್ಟಿ, ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.