-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಕಟೀಲು ಗೋಶಾಲೆಯಲ್ಲಿ ಗೋಪೂಜೆ

ಕಟೀಲು ಗೋಶಾಲೆಯಲ್ಲಿ ಗೋಪೂಜೆ

ಕಟೀಲು : ದೀಪಾವಳಿ ಹಬ್ಬದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಮಾಂಜ ನಂದಿನಿ ಗೋಶಾಲೆಯಲ್ಲಿ ಕಾವೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಗೋ ಪೂಜೆ ಬುಧವಾರ ಸಾಂಪ್ರದಾಯಿಕವಾಗಿ ನಡೆಯಿತು.  ಭಜನೆ,  ಅಮೃತವಚನ ಪಂಚಾಂಗ ಪಠಣವನ್ನು ಪಠಿಸಲಾಯಿತು. ಮಾನಸಿಕ ಸಿದ್ಧತೆ ಉಸಿರಾಟ ಕ್ರಿಯೆ ಗಣಪತಿ ನಮಸ್ಕಾರ, ದುರ್ಗ ನಮಸ್ಕಾರ, ವಿಷ್ಣು ನಮಸ್ಕಾರ. ಅಮೃತಾಸನ,ಪ್ರಾತ್ಯಕ್ಷಿಕೆ ಯೊಂದಿಗೆ  ಶಿಕ್ಷಕರು ನಡೆಸಿಕೊಟ್ಟರು.
ನಗರ ಸಹ ಸಂಚಾಲಕ ಆನಂದ  ಗೋಪೂಜೆ ಮಹತ್ವ ತಿಳಿಸಿದರು. ಯೋಗ ಬಂಧುಗಳು ಸೇರಿ ಹಟ್ಟಿಗಳನ್ನು ಸ್ವಚ್ಛಗೊಳಿಸಿದರು.
ಅರ್ಚಕರಾದ ಪದ್ಮನಾಭ ಭಟ್ ಇವರ ಮಾರ್ಗದರ್ಶನದಲ್ಲಿ ಗೋಪೂಜೆ ಯನ್ನು ನಡೆಸಲಾಯಿತು. 
 ಕಾವೂರು ನಗರದ 150 ಯೋಗಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾ ಸಂಯೋಜಕರು ಶ್ರೀಮತಿ ಕನಕ ಅಮೀನ್, ಮಕ್ಕಳ ಶಿಕ್ಷಣ ಪ್ರಮುಖರಾದ ಶ್ರೀಮತಿ ಶ್ರೀಕಲ, ಲೆಕ್ಕಪತ್ರ ಪ್ರಮುಖರಾದ ಸುಬ್ರಹ್ಮಣ್ಯ, ನಗರ ಸಂಚಾಲಕರು ಶ್ರೀನಿವಾಸ,  ನಗರ ಪ್ರಮುಖರಾದ ಮನೋಹ, ಉಮೇಶ,  ಜಯರಾಮ, ಹರ್ಷ, ಮಲ್ಲಿಕ, ಜೀವನ್ ಪ್ರಸಾದ, ವಸಂತ ಉಪಸ್ಥಿತರಿದ್ದರು. 
ಗುಣಪ್ರಭಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಸಂಚಾಲಕ ಪದ್ಮನಾಭ ವಂದಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ