ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ವತಿಯಿಂದ ದೀಪಾವಳಿ ಸಂಭ್ರಮ
Tuesday, October 21, 2025
ಬಜಪೆ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ವತಿಯಿಂದ ಆ. 20 ರಂದು ಬಾಲ ಏಸು ನಿಲಯ - ಅನಾಥಾಶ್ರಮ ಮೇರಿಹಿಲ್ ಮಂಗಳೂರು ಇಲ್ಲಿ ದೀಪಾವಳಿ ಹಬ್ಬವನ್ನು ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸಿ ಸವಿ ಭೋಜನವನ್ನುಂಡು, ಸಿಹಿ ವಿತರಿಸಿ ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭೂ ಮಾಪಕ ಪ್ರಶಾಂತ್, ಕಟೀಲು ಕನ್ಸ್ಟ್ರಕ್ಷನ್ ನ ಮಾಲಕ ಅಭಿಲಾಷ್ ಶೆಟ್ಟಿ ಕಟೀಲು, ನಿಲಯದ ಮೇಲ್ವಿಚಾರಕಿ ಪ್ರೇಮಲತಾ, ವಿಜಯ ಯುವ ಸಂಗಮದ ಅಧ್ಯಕ್ಷ ಪ್ರವೀಣ್ ಕೆ.ಎಮ್, ಕಾರ್ಯದರ್ಶಿ ಮನೀಶ್ ಶೆಟ್ಟಿ, ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಹಿರಿಯ ಸದಸ್ಯ ಸತೀಶ್ ಶೆಟ್ಟಿ ಸಂಗಮದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿ, ಮನೀಶ್ ಶೆಟ್ಟಿ ವಂದಿಸಿದರು.