ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಜ್ಞಾನವಿಕಾಸ ವಿಭಾಗದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
Thursday, October 23, 2025
ಬಜಪೆ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಜ್ಞಾನವಿಕಾಸ ವಿಭಾಗದ ಆರೋಗ್ಯ ತಪಾಸಣಾ ಶಿಬಿರವನ್ನು ಜನಜಾಗೃತಿಯ ಮಾಜಿ ಸ್ಥಾಪಕ ಅಧ್ಯಕ್ಷ ಭುವನಾಭಿರಾಮ ಉಡುಪ ಅವರು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪೂಜ್ಯರು ಜನಪಯೋಗಿ ಕಾರ್ಯಕ್ರಮಗಳನ್ನು ನಡೆಸುತಿದ್ದು ಸಾಮಾನ್ಯ ರೈತಾಪಿ ಜನರಿಗೆ ಕೂಡಾ ಉತಮ ಸವಲತ್ತು ಗಳು ದೊರಕಿವೆ. ಸಮಾಜದಲ್ಲಿ ದುರ್ಬಲ ವರ್ಗದ ಜನರಿಗೆ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಯೋಜನೆಯು ಉಪಯೋಗವಾಗುತ್ತಿದ್ದು ಇದರಿಂದ ಮಾಧ್ಯಮ ವರ್ಗದ ಜನರಿಗೆ ತುಂಬಾ ಸಹಾಯವಾಗಿದೆ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಲು ಸಹಾಯವಾಗಿದೆ ಎಂದರು.
ಅಧ್ಯಕ್ಷ ಹಾಗೂ ಜನಜಾಗೃತಿಯ ಸದಸ್ಯ ಸಾಯಿನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಕೊರಿಯರ್ ಮಾತನಾಡಿ ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ ಅರಿವು ಮೂಡಿಸುವಲ್ಲಿ ಯೋಜನೆ ಉತ್ತಮ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭ ಇನ್ನರ್ ವೀಲ್ ಅಧ್ಯಕ್ಷ ರೇಖಾ, ಸಿಎಸ್ ಸಿ ನೋಡಲ್ ಧನಂಜಯ, ಸೇವಾಪ್ರತಿನಿಧಿ ಕಮಲ ವಿಶಾಲಾಕ್ಷಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜನಜಾಗೃತಿ ಸಮಿತಿ ಸದಸ್ಯ ಧನಂಜಯ ಶೆಟ್ಟಗಾರ್ ಧನ್ಯವಾದವಿತ್ತರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಸುಮಾರು 120 ಸದಸ್ಯರು ಇದರ ಸದಪಯೋಗವನ್ನು ಪಡೆದುಕೊಂಡರು