ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ಆಯ್ಕೆ
Saturday, October 11, 2025
ಬಜಪೆ:ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸಭೆಯು ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರದಂದು ದಲಿತ ಸಂಘದ ರಾಜ್ಯ ಸಂಚಾಲಕ ಎಂ.ದೇವದಾಸ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಿರಾಜ್ ಬಜ್ಪೆ ಯವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು.
ಮೊನಕ, ಉಪಾಧ್ಯಕ್ಷರುಗಳಾಗಿ ದೀಪಕ್ ಪೂಜಾರಿ, ಇಂಜಿನಿಯರ್ ಇಸ್ಮಾಯಿಲ್ , ಥೋಮಸ್ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಗೋಪಾಲ ಸುವರ್ಣ, ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ, ಜೊತೆ ಕಾರ್ಯದರ್ಶಿಯಾಗಿ ಆಯಿಷಾ, ಕೋಶಾಧಿಕಾರಿಯಾಗಿ ಮಾಲತಿ, ಕಾನೂನು ಸಲೆಹೆಗಾರರಾಗಿ ವಕೀಲರಾದ ವಿನೋದರ ಪೂಜಾರಿ, ನಿವೃತ ಪಿಡಿಓ ಮಾಧವ ಅಮೀನ್ ಅವರುಗಳನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು.
ಬಜ್ಪೆಯ ಸರ್ವತೋಮ ಅಭಿವೃಧಿಯ ಬಗ್ಗೆ ಚಿಂತನೆ, ನ್ಯಾಯಪರ ಧ್ವನಿ, ಅನ್ಯಾಯದ ವಿರುದ್ಧ ಹೋರಾಟ, ಸಾಮಾಜಿಕ ನ್ಯಾಯ, ಧ್ವನಿ ಇಲ್ಲದವರ ಪರವಾಗಿ ಧ್ವನಿಗೂಡಿಸುವುದು ಮತ್ತು “ನಮ್ಮ ಧರ್ಮ ನಮ್ಮೊಂದಿಗೆ - ನಮ್ಮ ಸ್ನೇಹ ಎಲ್ಲರೊಂದಿಗೆ,” ಎಂಬ ದ್ಯೇಯ ವಾಕ್ಯದೊಂದಿಗೆ ನಮ್ಮ ಹೋರಾಟ ನಿರಂತರ ನಡೆಸಬೇಕು ಎಂಬುದರ ಬಗ್ಗೆ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ವಿಜಯ ಸುವರ್ಣ ಸ್ವಾಗತಿಸಿದರು. ಆಯಿಷಾ ವಂದಿಸಿದರು.