ಸೂರಿಂಜೆ: ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಮನೋಹರ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಅನಿಲ್ ಶೆಟ್ಟಿ ಆಯ್ಕೆ
Monday, September 15, 2025
ಸುರತ್ಕಲ್: ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಮದೇವ ಭಜನಾ ಮಂಡಳಿಗೆ ಪ್ರಸ್ತುತ ಸಾಲಿನಲ್ಲಿ 75 ನೇ ವರ್ಷಾಚರಣೆ ಆಚರಿಸುವ ಸಲುವಾಗಿ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಬೊಳ್ಳಾರುಗುತ್ತು ಸೂರಿಂಜೆ, ಕಾರ್ಯಾಧ್ಯಕರಾಗಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಜಯಶೀಲ ಪೊನ್ನಗಿರಿ ಸೂರಿಂಜೆ, ಕೋಶಾಧಿಕಾರಿಯಾಗಿ ವಾಮನ ಶೆಟ್ಟಿ ಗೋಣಮಜಲು ಸೂರಿಂಜೆ ಅಯ್ಕೆಯಾದರು.