ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಸು ರಕ್ಷಕ್ ಯೋಜನೆಯಡಿ ಅತ್ತೂರು ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ
Thursday, September 18, 2025
ಹಳೆಯಂಗಡಿ: ಪಡುಪಣಂಬೂರಿನ ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಸು ರಕ್ಷಕ್ ಯೋಜನೆಯಡಿ ಅತ್ತೂರು ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ವು ಸೆ. 17 ಬುಧವಾರದಂದು ನಡೆಯಿತು.
ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್ ಅವರು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ಟ್ರಸ್ಟ್ ವತಿಯಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಅಸಹಾಯಕರಿಗೆ ಸಹಾಯ ಹಸ್ತ ಕಾರ್ಯಕ್ರಮಗಳು ನಡೆಯುತ್ತಿದ್ದು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿಯ ಚಿಂತನ ದೃಷ್ಟಿಯಿಂದ ಕಂಪ್ಯೂಟರ್ ನೀಡಲಾಗಿದೆ.ಟ್ರಸ್ಟ್ ನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಾನಂದ ಪ್ರಭು ಮಾತನಾಡಿ ಸರಕಾರಿ ಸಂಸ್ಥೆಗೆ ದಾನಿಗಳ ನೆಲೆಯಲ್ಲಿ ಸಹಾಯ ಹಸ್ತ ಸೇವಾ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದರು
ಈ ಸಂದರ್ಭ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್, ಮಂಗಳೂರು ಕೆ ಎಂ ಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ರಿತೇಶ್ ಎಂ , ಅರಸು ಕಂಬಳ ಸಮಿತಿಯ ಉಪಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಮಾರ್ಗರೇಟ್ ಸುದರ್ಶಿನಿ ಸ್ವಾಗತಿಸಿದರು
ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ್ ರವರು ಪ್ರಸ್ತಾವನೆ ಸಲ್ಲಿಸಿ, ಧನ್ಯವಾದ ಅರ್ಪಿಸಿದರು.