ಕುಳಾಯಿ -ಕಾನ ರೈಲ್ವೆ ಬ್ರಿಡ್ಜ್ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಡಾ. ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ
ಸುರತ್ಕಲ್ :ಸಾರ್ವಜನಿಕರ ಬಹು ಬೇಡಿಕೆಯ ಕುಳಾಯಿ ಕಾನ ಬ್ರಿಡ್ಜ್ ರಸ್ತೆಗೆ ಸುಮಾರು 26ಲಕ್ಷ ವೆಚ್ಚದಲ್ಲಿ ನಡೆಯಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಸುನಿಲ್ ಕುಳಾಯಿ, ಮಹಾ ಶಕ್ತಿಕೇಂದ್ರ ಸುರತ್ಕಲ್ 1ಮತ್ತು 2ರ ಬಿಜೆಪಿಯ ನಿಕಟ ಪೂರ್ವ ಮನಪಾ ಸದಸ್ಯರು, ಬಿಜೆಪಿ ಮುಖಂಡರು, ವಾರ್ಡ್ ಅಧ್ಯಕ್ಷರು, ಕಾರ್ಯದರ್ಶಿ, ಬೂತ್ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಪ್ರಮುಖ ಕಾರ್ಯಕರ್ತರು, ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.