ಮುಲ್ಕಿ ನಗರ ಪಂಚಾಯತ್ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಸಹಭಾಗಿತ್ವದೊಂದಿಗೆ ಪೌರಕಾರ್ಮಿಕರ ದಿನಾಚರಣೆ
Thursday, September 25, 2025
ಮುಲ್ಕಿ: ನಗರ ಪಂಚಾಯತ್ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಸಹಭಾಗಿತ್ವದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಕಾರ್ನಾಡ್ ಸಮುದಾಯ ಭವನದಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ವಹಿಸಿ ಮಾತನಾಡಿ ಪೌರಕಾರ್ಮಿಕರು ಸ್ವಚ್ಛತಾ ರಾಯಭಾರಿಗಳಾಗಿದ್ದು ನಗರ ಪಂಚಾಯತ್ ನ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಶ್ರಮ ವಹಿಸಬೇಕು ಎಂದರು
ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸ್ವಚ್ಛತೆಗೆ ಪೂರಕವಾಗಿ ಮುಲ್ಕಿ ಪಂಚಾಯತ್ ವ್ಯಾಪ್ತಿಯಲ್ಲಿ ಎಂ ಆರ್ ಎಫ್ ಘಟಕ ಸ್ಥಾಪಿಸಿದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ಪೌರಕಾರ್ಮಿಕ ವಹಿಸಿಕೊಂಡಿದ್ದಾರೆ. ಘಟಕದ ಬದಿಯಲ್ಲಿ ಮುಂದಿನ ದಿನಗಳಲ್ಲಿ ವಿಶ್ರಾಂತಿ ಕೋಣೆ ಅನುಷ್ಠಾನಗೊಳಿಸಲಾಗುವುದು. ನಗರ ಪಂಚಾಯತಿ ಸ್ವಚ್ಛತೆಗೆ ಪೌರಕಾರ್ಮಿಕರ ಸಹಕಾರ ಅಗತ್ಯವಾಗಿದ್ದು ಅವರ ಸಮಸ್ಯೆ ತಿಳಿಸಿದ್ದಲ್ಲಿ ಬಗೆಹರಿಸಲಾಗುವುದು ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ, ನ ಪಂ ಸದಸ್ಯರಾದ ಪುತ್ತು ಬಾವ, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್,ಸುಭಾಷ್ ಶೆಟ್ಟಿ, ಇಂಜಿನಿಯರ್ ತುಳಸಿದಾಸ್, ಲ.ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ನ. ಪಂ.ಸಿಬ್ಬಂದಿ ಭರತಾಂಜಲಿ ನಿರೂಪಿಸಿದರು
ಬಳಿಕ ಪೌರ ಕಾರ್ಮಿಕರಿಗೆ ನಡೆದ ಆಟೋ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪೌರಕಾರ್ಮಿಕರನ್ನು ಗೌರವಿಸಲಾಯಿತು